ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕಾಮರ್ಸ್ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ದ್ವಿತೀಯ ವರ್ಷದ ಬಿ.ಕಾಂ. ಮತ್ತು ಬಿ.ಬಿ.ಎ. ವಿದ್ಯಾರ್ಥಿಗಳಿಗೆ ಹೂಡಿಕೆದಾರರ ಅರಿವು ಕಾರ್ಯಾಗಾರವನ್ನು ನಡೆಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಜ್ಞಾನಾರ್ಜನೆಗೆ ಬಳಸಿಕೊಂಡ ಬಂಡವಾಳ ಭವಿಷ್ಯದ ದಾರಿದೀಪ ಎಂದು ವಿದ್ಯಾರ್ಥಿಗಳಿಗೆ ಹೂಡಿಕೆ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮವು ಮೂರು ಆವೃತ್ತಿಯಲ್ಲಿ ನಡೆಯಿತು. ಒಂದನೇ ಆವೃತ್ತಿಯಲ್ಲಿ ಶ್ರೀ ಲಿಯೋ ಅಮಲ್, ಫ್ರಾಂಕ್‍ಲಿನ್ ಟೆಂಪ್ಲಿಟಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಹಿರಿಯ ಶಾಖೆಯ ವ್ಯವಸ್ಥಾಪಕ, ಎರಡನೇ ಮತ್ತು ಮೂರನೇ ಆವೃತ್ತಿಯಲ್ಲಿ ಸ್ವಪ್ನ ಶೆಣೈ ಎಮ್., ಇನ್ವೆಸ್ಟ್‍ಮೆಂಟ್ ಸರ್ವಿಸ್ ಪ್ರೊಫೆಶನಲ್ ಇವರು ಹಣದ ಹೂಡಿಕೆಯ ವಿವಿಧ ಶಾಖೆಗಳನ್ನು ಸಂಕ್ಷಿಪ್ತವಾಗಿ ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ. ಭಟ್ ಸ್ವಾಗತಿಸಿದರು. ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ ವಂದಿಸಿದರು. ವಿದ್ಯಾರ್ಥಿಗಳಾದ ನೇಹಾ ಅತಿಥಿಗಳನ್ನು ಪರಿಚಯಿಸಿ, ಸಮೃದ್ಧಿ ಕಿಣಿ ನಿರೂಪಿಸಿದರು.