ಜಾರ್ಜ್‌ಟೌನ್ : ಉಕ್ರೇನ್ – ರಷ್ಯಾ ಸಂಘರ್ಷ ತಾರಕಕ್ಕೆ ಏರಿರುವ ಹೊತ್ತಿನಲ್ಲೇ ಮತ್ತೆ ಶಾಂತಿ ಮಂತ್ರ ಜಪಿಸಿರುವ ಪ್ರಧಾನಿ ಮೋದಿ, ಇದು ಯುದ್ಧದ ಸಮಯವಲ್ಲ ಎಂದು ಮತ್ತೆ ಸಾರಿ ಹೇಳಿದ್ದಾರೆ. ಗಯಾನ ಸಂಸತ್ತಿನ ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಿ, ‘ಇದು ಸಂಘರ್ಷದ ಸಮಯವಲ್ಲ ಇದು ಸಂಘರ್ಷಗಳನ್ನು ಸೃಷ್ಟಿಸುವ ಷರತ್ತುಗಳನ್ನು ಗುರುತಿಸುವ ಮತ್ತು ಅದನ್ನು ತೆಗೆದು ಹಾಕುವ ಸಮಯ. ಜಗತ್ತಿನಲ್ಲಿ ಯಾವುದೇ ಬಿಕ್ಕಟ್ಟು ಉಂಟಾದರೂ ನೆರವು ನೀಡುವಲ್ಲಿ ಭಾರತ ಮೊದಲಿರುತ್ತದೆ ಭಾರತ ಎಂದೂ ಸ್ವಾರ್ಥ, ವಿಸ್ತರಣಾ ನೀತಿಯನ್ನು ಅನುಸರಿಸಿಲ್ಲ ಜಗತ್ತು ಮುಂದುವರೆಯಬೇಕಾದರೆ ‘ಪ್ರಜಾಪ್ರಭುತ್ವ, ಮಾನವೀಯತೆ ಮೊದಲು’ ಎಂಬ ಮಂತ್ರ ಅಗತ್ಯ’ ಎಂದರು
Categories
ಇದು ಯುದ್ಧದ ಸಮಯವಲ್ಲ : ಪ್ರಧಾನಿ ಮೋದಿ