ಕುಂದಾಪುರ : ಬಹುಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಚೈತ್ರಾ ಕುಂದಾಪುರ ಹೆಸರಿನ ಜೊತೆಗೆ ಕುಂದಾಪುರ ತಾಲೂಕಿನ ಹೆಸರನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಬೆಂಗಳೂರಿನ ಹನುಮಂತನಗರದ ನಿವಾಸಿಯಾದ ಗಣೇಶ್ ಶೆಟ್ಟಿ ಎಂಬವರು ಸಿಟಿ ಸಿವಿಲ್ ಕೋರ್ಟಿಗೆ ಮನವಿ ಮಾಡಿದ್ದಾರೆ
ಚೈತ್ರದ ಜೊತೆಗೆ ಕುಂದಾಪುರ ಎಂದು ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದರಿಂದ ಕುಂದಾಪುರ ಜನತೆಯ ಮನಸ್ಸಿಗೆ ಘಾಸಿಯಾಗುತ್ತದೆ ಈ ಒಂದು ಘಟನೆಯಿಂದ ಇಲ್ಲಿಯ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಆದ್ದರಿಂದ ಮಾಧ್ಯಮಗಳು ಕುಂದಾಪುರ ಎಂದು ಉಲ್ಲೇಖಿಸಿರುವ ಸುದ್ದಿ ವಿಡಿಯೋ ಲೇಖನ ಹಾಗೂ ಪೋಸ್ಟ್ ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ