192
ಉಡುಪಿ : ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಚೇರಿ, ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬ್ರಹ್ಮಾವರ ಹಾಗೂ ಪರ್ಕಳ ಪ್ರೌಢಶಾಲೆ ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ “ಮಣಿಪಾಲ ಹೋಬಳಿ ಮಟ್ಟದ ಕ್ರೀಡಾಕೂಟ” ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.
ಶಾಸಕರು ಮಾತನಾಡಿ ಇಂದಿನ ಮಕ್ಕಳೆ ನಮ್ಮ ದೇಶದ ಮುಂದಿನ ಆಸ್ತಿ. ಮಕ್ಕಳಿಗೆ ಶಿಕ್ಷಣದಷ್ಟೇ ಕ್ರೀಡೆಯು ಅಗತ್ಯ ಎಂದು ಹೇಳಿದ ಅವರು ಸೋಲಿರಲಿ ಗೆಲುವಿರಲಿ ಅದನ್ನು ಸಮಾನವಾಗಿ ಸ್ವೀಕರಿಸಿ ಸೋಲೇ ಗೆಲುವಿನ ಮೆಟ್ಟಿಲು ಎಂದರು.
ಈ ಸಂದರ್ಭದಲ್ಲಿ ಪರ್ಕಳ ಎಜುಕೇಶನ್ ಸೊಸೈಟಿ (ರಿ.) ಅಧ್ಯಕ್ಷರಾದ ಬಿ.ಅರುಣಾಚಲ ಹೆಗ್ಡೆ, ಬ್ರಹ್ಮಾವರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಪದ್ಮಾವತಿ, ಪರ್ಕಳ ಎಜುಕೇಶನ್ ಸೊಸೈಟಿ (ರಿ.) ಸಂಚಾಲಕರಾದ ದಿನೇಶ್ ಹೆಗ್ಡೆ ಆತ್ರಾಡಿ ಹಾಗೂ ಸದಾನಂದ ಉಪ್ಪಿನಕುದ್ರು, ಶಿವರಾಮ ಶೆಟ್ಟಿ, ದಿವಾಕರ ಶೆಟ್ಟಿ ಹಾಗೂ ಶಾಲಾ ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

