ಗಂಗೊಳ್ಳಿ : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗ್ರಾಮದ ಚಂದ್ರಿಕಾ ಬಾರ್ ಬಳಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ
ದೀಪಕ್ ಕುಲಾಲ್
ನಾಡಾ ಗ್ರಾಮದ ನಿವಾಸಿಯಾದ ಪರಿಶಿಷ್ಟ ಜಾತಿಗೆ ಸೇರಿದ ಸುರೇಶ ಎಂಬವರಿಗೆ ಪರಿಚಯದ ವ್ಯಕ್ತಿಯಾದ ಆದಿತ್ಯ ಎಂಬವರು ಕರೆ ಮಾಡಿ ಚಂದ್ರಿಕಾ ಬಾರ್ ಬಳಿ ಬರುವಂತೆ ತಿಳಿಸಿದ್ದು ಅದರಂತೆ ಸುರೇಶ್ ತನ್ನ ಸಂಗಡಿಗರಾದ ವಸಂತ ರೋಹಿತ್ ಹಾಗೂ ಸುಕುಮಾರ್ ರವರೊಂದಿಗೆ ಚಂದ್ರಿಕಾ ಬಾರ್ ಬಳಿ ಬಂದಾಗ
ಆದಿತ್ಯ ಪೂಜಾರಿ
ಆದಿತ್ಯ ಎಂಬಾತನು ತನ್ನ ಸಂಗಡಿಗರಾದ ಸಂತೋಷ ಸನತ್ ಪವನ್ ಶೆಟ್ಟಿ ದೀಪಕ್ ಸುದರ್ಶನ್ ಹಾಗೂ ಚೇತನ್ ಶೆಟ್ಟಿಯವರೊಂದಿಗೆ ಕೂಡಿಕೊಂಡು ಜಾತಿಯ ವಿಷಯದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ದೋಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದ್ದು ಹಲ್ಲೆಗೊಳಗಾದ ಸುರೇಶ್ ಹಾಗೂ ಸುಕುಮಾರ್ ರವರು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ
ಸನತಾ ಶೆಟ್ಟಿ
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ರವರ ಮಾರ್ಗದರ್ಶನದಲ್ಲಿ ಕುಂದಾಪುರದ ಡಿವೈಎಸ್‌ಪಿ ಬೆಳ್ಳಿಯಪ್ಪನವರು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದು ಮೂವರು ಆರೋಪಿಗಳನ್ನು ಬಂಧಿಸಿ ಉಳಿದವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆಯ ಪ್ರಕರಣ ದಾಖಲಾಗಿದೆ
ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ