ಕುಂದಾಪುರ: ಕುಂದಾಪುರದ ಖಾರ್ವಿಕೇರಿ ನಿವಾಸಿಯಾದ ರಾಘವೇಂದ್ರ ಶೇರುಗಾರ್ ಯಾನೆ ಬನ್ಸ್ ರಾಘು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ
ಬಂಧಿತರು ಶಿವಮೊಗ್ಗ ಮೂಲದವರು ಎಂದು ತಿಳಿದು ಬಂದಿದ್ದು ಇವರನ್ನು ಬೆಂಗಳೂರಿನಲ್ಲಿ ಬಂಧಿಸಿ ಕುಂದಾಪುರಕ್ಕೆ ಕರೆತರಲಾಗಿದ್ದು ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಆರೋಪಿಗಳಿಬ್ಬರ ಪೈಕಿ ಒಬ್ಬಾತ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದು ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ
ಕ್ಷುಲ್ಲಕ ಕಾರಣವೇ ಕೊಲೆಯಲ್ಲಿ ಅಂತ್ಯ:
ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಪೂರ್ವಯೋಜಿತ ಕೃತ್ಯವಲ್ಲ ಕಾರಿಗೆ ಸೈಡ್ ಕೊಡುವ ಕ್ಷುಲ್ಲಕ ವಿಚಾರದಲ್ಲಿ ನಡೆದ ಘಟನೆ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ ಅರೋಪಿಗಳಿಬ್ಬರು ಬನ್ಸ್ ರಾಘುವಿಗೆ ಯಾವುದೇ ರೀತಿಯ ಪರಿಚಯವಿಲ್ಲ ಮತ್ತು ಪೂರ್ವದ್ವೇಷವು ಇಲ್ಲ ಎಂದು ತಿಳಿದು ಬಂದಿದೆ
ಡಿವೈಎಸ್ಪಿಯವರಿಂದ ಮಾಹಿತಿ
ಕುಂದಾಪುರದ ಡಿವೈಎಸ್ಪಿ ಬೆಳ್ಳಿಯಪ್ಪನವರು ಈ ಕ್ಷುಲ್ಲಕ ಘಟನೆಯ ಸಂಪೂರ್ಣ ಮಾಹಿತಿಯನ್ನು ದೂರುದಾರರ ಮನೆಯವರಿಗೆ ಅವರ ಸಂಬಂಧಿಕರಿಗೆ ಹಾಗೂ ಅವರ ಆಪ್ತವಲಯದವರಿಗೆ ತಿಳಿಸಿದ್ದು ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದ್ದಾರೆ ಇಂದು ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಪೊಲೀಸ್ ಕಸ್ಟಡಿಗಾಗಿ ಮನವಿ ಸಲ್ಲಿಸುವ ನಿರೀಕ್ಷೆ ಇದೆ
ಆರೋಪಿಗಳ ಬಂಧನಕ್ಕಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬೆಳ್ಳಿಯಪ್ಪ ವೃತ್ತ ನಿರೀಕ್ಷಕ ನಂದಕುಮಾರ್ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಪಿ.ಎಂ.ದಿವಾಕರ್ ನೇತೃತ್ವದಲ್ಲಿ 3 ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ