ಕುಂದಾಪುರ : 1600 ವರ್ಷಗಳ ಇತಿಹಾಸವುಳ್ಳ ಪುರಾತನವಾದ ಸೌಕೂರಿನ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನವು ಪುಷ್ಪ ಪವಾಡ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿದೆ ಗರ್ಭಗುಡಿಯ ಸುತ್ತಲಿನ ಮೂರು ದಿಕ್ಕಿನಲ್ಲಿರುವ ದ್ವಾರ ಮತ್ತು ತೀರ್ಥಮಂಟಪದಲ್ಲಿರುವ ಸಿಂಹ ಇದೆಲ್ಲವನ್ನು ಪರಿಶೀಲಿಸಿದಾಗ ದೇವಸ್ಥಾನವು ಹೊಯ್ಸಳ ಅಥವಾ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವುದಕ್ಕೆ ಪುಷ್ಟೀಕರಣ ಸಿಗುತ್ತದೆ ಒಂದೇ ಪೀಠದಲ್ಲಿ ಮಹಾಕಾಳಿ,ಮಹಾಲಕ್ಷ್ಮೀ, ಮಹಾಸರಸ್ವತಿಯು ನೆಲೆಯಾಗಿರುವುದು ಶ್ರೀದುರ್ಗಾಪರಮೇಶ್ವರೀ ಅಮ್ಮನವರ ವೈಶಿಷ್ಟವಾಗಿದೆ
“ಪುಷ್ಪಪವಾಡ” ಕ್ಕೆ ಹೆಸರಾದ “ಶ್ರೀ ಕ್ಷೇತ್ರ”ದಲ್ಲಿ ಭಕ್ತರ ಬೇಡಿಕೆಗೆ ‘ಪುಷ್ಪಪ್ರಸಾದ’ದ ರೂಪದಲ್ಲಿ ದೇವಿಯ ತನ್ನ ಅನುಮತಿಯನ್ನು ಸೂಚಿಸುವುದನ್ನು ಇಲ್ಲಿ ನೋಡಬಹುದು. ದೇವಿಯನ್ನು ನಂಬಿದ ಭಕ್ತರು ಹರಕೆ ರೂಪದಲ್ಲಿ ಯಕ್ಷಗಾನ, ಹರಿವಾಣ ನೈವೇದ್ಯ, ತುಲಾಭಾರ, ರಂಗಪೂಜೆ, ಪುಷ್ಪರಥೋತ್ಸವ, ಸರ್ವಾಲಂಕಾರ ಪೂಜೆ, ಚಂಡಿಕಾಹೋಮ, ದುರ್ಗಾಹೋಮ, ಪಾರಾಯಣ, ಅನ್ನಧಾನ ನೆರವೇರಿಸಿ, ಸಂತಾನ, ವಿವಾಹ, ಕೋರ್ಟು- ಕಛೇರಿ, ವ್ಯಾಪಾರ, ವ್ಯವಹಾರ, ಉದ್ಯೋಗಗಳಲ್ಲಾದ ತೊಂದರೆಗಳನ್ನು ನಿವಾರಿಸಿಕೊಂಡ ಬಗ್ಗೆ ಅನೇಕ ಸಾಕ್ಷಿಗಳಿವೆ