ಉಡುಪಿ : ಮಣಿಪಾಲದ ಶೀಂಬ್ರಾ ಬ್ರಿಜ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಗಾಂಜಾ ಪೆಡ್ಲರ್ಗಳನ್ನು ಮಣಿಪಾಲ ಠಾಣಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ
ಸಾಸ್ತಾನ ಮೂಲದ ಅಬ್ದುಲ್ ಲತೀಫ್ (32 ವರ್ಷ) ಮಹಮದ್ ಅಶ್ಫಕ್ (21 ವರ್ಷ) ಕೋಟೇಶ್ವರದ ಮುಸ್ತಾಫ್ ಹಂಜ (35 ವರ್ಷ) ಮತ್ತು ಉಪ್ಪೂರಿನ ಶಕಿಲೇಶ್ (25 ವರ್ಷ) ಬಂಧಿತ ಆರೋಪಿಗಳು ಖಚಿತ ಮಾಹಿತಿ ಆಧರಿಸಿ ಮಣಿಪಾಲ ಠಾಣಾಧಿಕಾರಿ ರಾಘವೇಂದ್ರ ಮತ್ತು ಅವರ ತಂಡ ದಾಳಿ ನಡೆಸಿ ಶೀಂಬ್ರಾ ಸೇತುವೆ ಬಳಿ ಕಪ್ಪು ಬಣ್ಣದ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ ಅವರಿಂದ ಅಮಲು ಪದಾರ್ಥವನ್ನು ವಶಕ್ಕೆ ಪಡೆದಿದ್ದಾರೆ
ಬಂಧಿತರಿಂದ 274 ಗ್ರಾಂ ಗಾಂಜಾ ಕಾರು ಹಾಗೂ 19,130 ನಗದು 5 ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ ಆರೋಪಿಗಳು ಮಾದಕ ವಸ್ತುಗಳನ್ನು ಮಣಿಪಾಲದಲ್ಲಿ ಮಾರಾಟ ಮಾಡುವ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಬಂಧಿತ ಆರೋಪಿಗಳು ಮಣಿಪಾಲದಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದ್ದು ಹಲವಾರು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿರುವುದು ಹಾಗೂ ಸೇವನೆ ಮಾಡಿರುವುದು ತಿಳಿದುಬಂದಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ತಿಳಿಸಿದ್ದಾರೆ