ಕುಂದಾಪುರ : ಕುಂದಾಪುರ ನಗರದ ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ್ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಟೆಂಪೊ ಟಾವೆಲ್ಲರ್ಗೆ ಮಹಿಳೆಯು ಅಡ್ಡ ಬಂದಿದ್ದು ಆಘಾತದಿಂದ ಮಹಿಳೆ ಮೃತಪಟ್ಟಿದ್ದಾರೆ
ಮಹಿಳೆಯನ್ನು ತಪ್ಪಿಸುವ ಭರದಲ್ಲಿ ಟೆಂಪೊ ಟ್ರಾವೆಲ್ಲರ್ ಚಾಲಕನು ವಾಹನವನ್ನು ಡಿವ್ಯಡರ್ ಮೇಲೆರಿಸಿ ಇಲೆಕ್ಟ್ರೀಕ್ ಕಂಬಕ್ಕೆ ಗುದ್ದಿದ್ದಾನೆ ಆಘಾತಗೊಂಡ ಮಹಿಳೆಯು ಸಾವನ್ನಪ್ಪಿದ್ದು ಶಿರಸಿಯ ಮಲ್ಲಮ್ಮ ಎಂದು ಗುರುತಿಸಲಾಗಿದೆ ಮಹಿಳೆಯ ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ
ಟಿಂಪೊ ಟ್ರಾವೆಲ್ಲರ್ ವಾಹನವು ರಾಮನಗರದ ಕನಕಪುರದಿಂದ ಮುರುಡೇಶ್ವರ ಪ್ರವಾಸಕ್ಕೆ ಬಂದು ಉಡುಪಿಗೆ ಮರಳುತ್ತಿರುವಾಗ ಈ ಘಟನೆ ಸಂಭವಿಸಿದೆ ಟಿಂಪೊ ಟ್ರಾವೆಲ್ಲರ್ ಚಾಲಕ ಹಾಗೂ ಪ್ರಯಾಣಿಸುತ್ತಿದ್ದ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ