Home » ಬಿ. ಬಿ. ಹೆಗ್ಡೆ ಕಾಲೇಜು : ಡಿಜಿ ಅನ್ವೇಷಣಾ
 

ಬಿ. ಬಿ. ಹೆಗ್ಡೆ ಕಾಲೇಜು : ಡಿಜಿ ಅನ್ವೇಷಣಾ

by Kundapur Xpress
Spread the love

ಕುಂದಾಪುರ (ಡಿ.08): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಉದಯೋನ್ಮುಖ ತಂತ್ರಜ್ಞಾನಕ್ಕೆ ಸಂಬಂಧಿಸಿದ ‘ಡಿಜಿ ಅನ್ವೇಷಣಾ’ ಅಂತರ್ ತರಗತಿ ಸ್ಪರ್ಧೆ ನಡೆಯಿತು.
ಕೋಟ ಪದವಿ ಪೂರ್ವ ಕಾಲೇಜಿನ ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಶ್ರೀಕಾಂತ್ ಚಡಗರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಅಗತ್ಯವಿರುವ ಪ್ರಚಲಿತ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ  ಫ್ರೋ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ವಿಭಾಗ ಹಮ್ಮಿಕೊಳ್ಳುತ್ತಿರುವ ವಿನೂತನ ಕಾರ್ಯಕ್ರಮಗಳನ್ನು ಪ್ರಶಂಶಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ಭಟ್ ಪ್ರಾಸ್ತಾವಿಸಿ, ಶ್ರೀಮತಿ ವಿನಯಾ ಶೆಟ್ಟಿ ಸ್ವಾಗತಿಸಿ, ಪೂಜಾ ವಂದಿಸಿ, ಶ್ವೇತಾ ಬಹುಮಾನ ವಿತರಣಾ ಪಟ್ಟಿಯನ್ನು ವಾಚಿಸಿದರು. ಪ್ರೀತಿ ಪಿ.ಆರ್., ತೃತೀಯ ಬಿ.ಕಾಂ. (ಸಿ) ನಿರೂಪಿಸಿದರು.
ಪ್ರಥಮ ವರ್ಷದ ಬಿ.ಕಾಂ. ಮತ್ತು ಬಿ.ಬಿ.ಎ. ವಿದ್ಯಾರ್ಥಿಗಳಿಗೆಂದೇ ಆಯೋಜಿಸಿದ ಡಿಜಿ ಅನ್ವೇಷಣಾ ಮೂರು ಸುತ್ತುಗಳನ್ನು ಒಳಗೊಂಡಿದ್ದು, ಇದರ ಡಿ.ಜಿ. ಕಲಾಪ – ಚರ್ಚಾ ಸ್ಪರ್ಧೆ, ಡಿಜಿ ಕ್ವೆಸ್ಟ್ – ರಸಪ್ರಶ್ನೆ, ಇನ್ನೋವೇಟಿವ್ A 1- ತಂತ್ರಜ್ಞಾನ ಉಪಯೋಗಿಸಿ ಉತ್ಪನ್ನಗಳ ಮಾರಾಟ ಈ ಮೂರು ಸುತ್ತುಗಳಲ್ಲಿ ಪ್ರಥಮ ಬಿ.ಕಾಂ. (ಡಿ) ಪ್ರಥಮ ಸ್ಥಾನ ಪಡೆದರೆ, ಪ್ರಥಮ ಬಿ.ಬಿ.ಎ. ಹಾಗೂ ಪ್ರಥಮ ಬಿ.ಕಾಂ. (ಇ) ತಲಾ ಒಂದು ಬಹುಮಾನ ಪಡೆದರು.

   

Related Articles

error: Content is protected !!