ಇಂದು ಲೋಕಾರ್ಪಣೆಗೊಳ್ಳಲಿರುವ ಮೊಗವೀರ ಭವನ
ಕುಂದಾಪುರ: ಸುಮಾರು 10 ಕೋಟಿಗೂ ಅಧಿಕ ವೆಚ್ಚದಲ್ಲಿ ಕುಂದಾಪುರದ ಚಿಕ್ಕನ್‍ಸಾಲ್ ರಸ್ತೆಯಲ್ಲಿ ನೂತನ ಸಭಾಭವನವಾದ “ಮೊಗವೀರ ಭವನ” ಇಂದು ಲೋಕಾರ್ಪಣೆಗೊಳ್ಳಲಿದೆ. ಈ ಸಭಾಭವನವು ಮೂರು ಅಂತಸ್ತುಗಳನ್ನು ಹೊಂದಿದ್ದು, 60 ಸಾವಿರ ಚದರ ಅಡಿ ವಿಸ್ತೀರ್ಣವಿದ್ದು ಮೂರನೇ ಮಹಡಿಯಲ್ಲಿ ಸಭಾವೇದಿಕೆಯನ್ನು ನಿರ್ಮಿಸಲಾಗಿದೆ. ಎರಡನೇ ಮಹಡಿಯಲ್ಲಿ ವಿಶಾಲವಾದ ಭೋಜನಾಲಯವಿದ್ದು 500ಕ್ಕೂ ಹೆಚ್ಚು ಜನ ಕುಳಿತು ಹಾಗೂ ಬಫೆಯಲ್ಲಿ ಊಟ ಮಾಡಬಹುದು
ಪ್ರಸ್ತುತ ಜನರ ಅಭಿರುಚಿಗೆ ತಕ್ಕಂತೆ ಸುಸಜ್ಜಿತ ಹವಾನಿಯಂತ್ರಿತವಾದ ಮೊಗವೀರ ಭವನವು ಇಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಮೊಗವೀರ ಭವನವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಮಹಿಷಾಸುರಮರ್ದಿನಿ ಸಭಾಂಗಣವನ್ನು ಮೀನುಗಾರಿಕೆ ಸಚಿವ ಎಸ್. ಅಂಗಾರ, ಸಚಿವ ಸುನಿಲ್ ಕುಮಾರ್ ಅಮ್ಮ ಮಿನಿಹಾಲ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಸದ ಬಿ. ವೈ. ರಾಘವೇಂದ್ರ ಅನ್ನಪೂರ್ಣೇಶ್ವರಿ ಭೋಜನಾಲಯ ಉದ್ಘಾಟಿಸುವರು. ಕಛೇರಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಲಿಫ್ಟ್ ವ್ಯವಸ್ಥೆಯನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಘಾಟಿಸುವರು. ಪಾಕಶಾಲೆಯನ್ನು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ಶಾಲಿನಿ ಡಾ. ಜಿ. ಶಂಕರ್ ವೇದಿಕೆಯನ್ನು ಸುರೇಶ್ ಆರ್. ಕಾಂಚನ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಎ. ಸುವರ್ಣ, ಪ್ರಮೋದ್ ಮಧ್ವರಾಜ್, ಉದ್ಯಮಿ ಆನಂದ್ ಸಿ. ಕುಂದರ್, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಯ ಸಿ. ಕೋಟ್ಯಾನ್, ಮುಂಬಯಿ ಉದ್ಯಮಿ ಗೋಪಾಲ ಎಸ್. ಪುತ್ರನ್, ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್ ಉಪಸ್ಥಿತರಿರುವರು.