ಕುಂದಾಪುರ : ಇಂದಿನ ದಿನ ಮನೆಗಳಲ್ಲಿ ಅನೇಕ ಸಮಸ್ಯೆಗಳು ಕಂಡು ಬರುತ್ತಿವೆ ಮಕ್ಕಳಲ್ಲಿ ವಿಶೇಷವಾಗಿ ಸಮಸ್ಯೆಗಳು ಕಂಡು ಬರುತ್ತಿದ್ದು ಸಂಸ್ಕಾರದಲ್ಲಿ ಕೊರತೆ, ಮೊಬೈಲ್ ಅಡಿಕ್ಷನ್, ಜಂಕ್ ಫುಡ್, ಮುಂತಾದ ಹಲವಾರು ಸಮಸ್ಯೆಗಳಿಂದ ಇವತ್ತು ಮಕ್ಕಳು ಮತ್ತು ಪೋಷಕರ ಮದ್ಯೆ ದೊಡ್ಡ ಕಂದಕ ನಿರ್ಮಾಣ ಆಗುತ್ತಿದೆ. ಇದರ ನಿವಾರಣೆ ಹೇಗೆ ? ಇದಕ್ಕೆ ನಾವೊಂದು ಪ್ರಯತ್ನ ಮಾಡುತ್ತಿದ್ದೇವೆ.. ಒಂದು ಮನೆಯಲ್ಲಿ ಅಕ್ಕಪಕ್ಕದ ಅಥವಾ ಆ ಕುಟುಂಬದ ಮಿತ್ರ ಕುಟುಂಬಗಳು ಒಂದು ದಿನ ಒಂದು ಘಂಟೆ ಸೇರಿ ನಮ್ಮ ಮಕ್ಕಳು ಮತ್ತು ಕುಟುಂಬದ ಸಾಮರಸ್ಯ ಕಾಪಾಡೋದು ಹೇಗೆ ಮತ್ತು ಮೇಲೆ ಹೇಳಿದ ಸಮಸ್ಯೆಗಳಿಗೆ ಪರಿಹಾರೋಪಾಯವಾಗಿ ಏನು ಮಾಡಬೇಕು ಎಂದು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ನೀವೂ ನಮ್ಮೊಂದಿಗೆ ಕೈ ಜೋಡಿಸಬಹುದು. ಇದಕ್ಕೆ ಯಾವುದೇ ಖರ್ಚು ಇಲ್ಲ. ನೀವು ಮಾಡಬೇಕಾಗಿರುವುದು ಇಷ್ಟೇ. ಒಂದು ಮನೆಯಲ್ಲಿ 3-4 ಮನೆಯ ಕುಟುಂಬದ ಸದಸ್ಯರನ್ನು ಜೋಡಿಸಿ ನಮಗೆ ಬರಲು ಹೇಳುವುದು. ಕನಿಷ್ಠ ಎರಡು ದಿನದ ಮೊದಲು ತಿಳಿಸಬೇಕು ಸಮಾಜದ ಬಗ್ಗೆ ಕಳಕಳಿ ಇರುವ ಪ್ರತಿಯೊಬ್ಬರೂ ಮಾಡಬೇಕಾದ ಕಾರ್ಯ ಎಂದು ತಿಳಿದು ಮಾಡೋಣ.. ಕುಂದಾಪುರ ಉಡುಪಿ ಬೈಂದೂರ್ ಸುತ್ತಮುತ್ತಲಿನ ಆಸಕ್ತರು 8168617224 ನಂಬರ್ ಗೆ ಕರೆ ಮಾಡಬಹುದು