Home » ಉಚಿತ ನೇತ್ರ ತಪಾಸಣೆ
 

ಉಚಿತ ನೇತ್ರ ತಪಾಸಣೆ

by Kundapur Xpress
Spread the love

ಉಡುಪಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಯುವ ರೆಡ್‌ ಕ್ರಾಸ್ ಘಟಕವು  ಮಾರ್ಚ್ 14 ಗುರುವಾರದಂದು ಪ್ರಸಾದ್ ನೇತ್ರಾಲಯ ಆಸ್ಪತ್ರೆ ಉಡುಪಿ ಮತ್ತು ಇಂಡಿಯನ್ ರೆಡ್‌ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ನೇತ್ರದಾನ ಅರಿವು ಮತ್ತು ಉಚಿತ ನೇತ್ರ ತಪಾಸಣಾ ಪರೀಕ್ಷೆಯನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಲಯನ್ ಪಿ.ಎಂ.ಜೆ.ಎಫ್. ಬಸ್ರೂರು ರಾಜೀವ್ ಶೆಟ್ಟಿ ಪಿಜಿಡಿ, ಅಧ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಉಡುಪಿ ಜಿಲ್ಲೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಪ್ರಸಾದ್ ನೇತ್ರಾಲಯ ಉಡುಪಿಯ ಸಲಹೆಗಾರರಾದ ಡಾ.ಅನುಷಾ ಭಾಗವಹಿಸಿದ್ದರು.ಅತಿಥಿಗಳಾಗಿ ಲಯನ್ ಅನಂತ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಉಡುಪಿ, ಮಿಡ್ ಟೌನ್ ಉಪಸ್ಥಿತರಿದ್ದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಮತ್ತು ಸಿಇಒ ಸಿ.ಎ.ಗೋಪಾಲ ಕೃಷ್ಣ ಭಟ್ ವಹಿಸಿದ್ದರು. ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ನ ಪ್ರಭಾರ ಪ್ರಾಂಶುಪಾಲರಾದ ಪ್ರೊ.ನಾರಾಯಣ ರಾವ್, ಯೂತ್ ರೆಡ್ಕ್ರಾಸ್ನ ಕಾರ್ಯ ನಿರ್ವಾಹಕರಾದ ಪ್ರೊ.ಅಶ್ವಿನಿ ಮತ್ತು ಪ್ರೊ.ಚೇತನಾ ಅವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಕ್ಷಿಯಾದರು. ನೇತ್ರದಾನ ಮಾಡಲು ಯಾರು ಅರ್ಹರು ಎಂಬುನ್ನು, ದಾನ ಮಾಡುವ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸಲಾಯಿತು ಮತ್ತು ಪ್ರತಿಜ್ಞೆ ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಯಿತು. ಈ ಅಧಿವೇಶನದ ನಂತರ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ನಡೆಯಿತು. 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಫರ್ಹಾನಾ ನಿರೂಪಿಸಿ ಸ್ಪಂದನ ಸ್ವಾಗತಿಸಿದರು

   

Related Articles

error: Content is protected !!