Home » ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಪಿನಕುದ್ರು
 

ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಪಿನಕುದ್ರು

by Kundapur Xpress
Spread the love

ಉಪ್ಪಿನಕುದ್ರು : ಶ್ರೀ ಗೋಪಾಲಕೃಷ್ಣ ದೇವಾಲಯವು ಸುಮಾರು ಅಂದಾಜು 800 ವರ್ಷಕ್ಕೂ ಹಿಂದಿನ ಇತಿಹಾಸವನ್ನು ಹೊಂದಿದೆ. ಪ್ರತಿ ವರ್ಷ ‘ರಾಮನವಮಿ’ಯಂದು ‘ಮನ್ವಹಾರಥೋತ್ಸವ’ ಜರಗುತ್ತದೆ. ಊರ ದೇವರಾಗಿ ನಂಬಿದ ಭಕ್ತರ ಸಕಲ ಇಷ್ಠರ್ಥವನ್ನು ಪೂರೈಸುವ ಗೋಪಾಲ ಕೃಷ್ಣನಾಗಿ ವಿರಾಜಮಾನನಾಗಿದ್ದಾನೆ

        ಚನ್ನಪ್ಪಮಯ್ಯ, ರಾಮಮಯ್ಯ, ಅನಂತ ಮಯ್ಯರಂತ ಹಿರಿಯ ‘ಮಯ್ಯ’ ಕುಟುಂಬದಿಂದ ‘ಮನ್ವಹಾರಥೋತ್ಸವ’ವನ್ನು ಆಚರಿಸಿಕೊಂಡು ಬಂದು ಇಂದು ನರಸಿಂಹ ಕಾರಂತ್ ಮಂಜುನಾಥ ಕಾರಂತ್, ಮತ್ತು ರಮೇಶ ಕಾರಂತರಿಂದ ಮುಂದುವರಿಸಿಕೊಂಡು ಬಂದಿದೆ

ದೇವಾಲಯದ ಉಪಾಧ್ಯಕ್ಷರಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ಅಭಿವೃದ್ಧಿಯ ಹರಿಕಾರರಾದ ರಾಜೇಶ ಕಾರಂತರು ತನ್ನ ಆರಾಧ್ಯ ದೇವರ ದೇವಾಲಯವನ್ನು ಧಾರ್ಮಿಕತೆಯ ಉನ್ನತ ಮಟ್ಟಕ್ಕೆ ಕೊಂಡು ಹೋಗುತ್ತಿರುವುದು ಯುವ ಸಮುದಾಯಕ್ಕೆ ದಾರಿದೀಪವಾಗಿದೆ. ಇವರಿಗೆ ಪೂರಕವಾಗಿ ಸಂಚಾಲಕ, ಕೃಷ್ಣಮೂರ್ತಿ ಐತಾಳ್ ಹಾಗೂ ಆಡಳಿತ ಮಂಡಳಿ ಬೆನ್ನೆಲುಬಾಗಿ ನಿಂತು ಸಹಕರಿಸಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ.

         ಪ್ರತಿ ವರ್ಷ ಶಿವರಾತ್ರಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸ್ವತಃ ಉಪಾಧ್ಯಕ್ಷರಾದ ರಾಜೇಶ ಕಾರಂತರು ಅದ್ಧೂರಿಯಾಗಿ ನಡೆಸುತ್ತಾ ಬಂದಿದ್ದಾರೆ. ಅಂತೆಯೇ ಅಧ್ಯಕ್ಷರಾದ  ರಮೇಶ್ ಕಾರಂತ್ ಮತ್ತು ಸಂಚಾಲಕರು ವಿವಿಧ ಧಾರ್ಮಿಕ ಮತ್ತು ಸಾಂಸ್ಕತಿಕ ಕಾರ್ಯಕ್ರಮದ ರೂವಾರಿಯಾಗಿದ್ದಾರೆ

        ಈ ವರ್ಷ ಉಪಾಧ್ಯಕ್ಷ  ಶ್ರೀ ರಾಜೇಶ್ ಕಾರಂತರು ಸ್ವತಹ ಕಾರ್ಯಕ್ರಮಕ್ಕೆ ಶ್ರೀ ದೇವರಿಗೆ  ನೂತನ ರಜತ ಪಲ್ಲಕ್ಕಿ ಸರ್ಮಪಿಸಿ ಇಡೀ ಜಾತ್ರೆಯನ್ನು ತನ್ನ ಮೇಲುಸ್ತುವಾರಿಯಲ್ಲಿ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ ಈ ವರ್ಷ ವಿಶೇಷವಾಗಿ ಪೇಜಾವರ ಮಠಾಧೀಶ ಶ್ರೀ ಶ್ರೀ ಪ್ರಸನ್ನ ತೀರ್ಥರು ಆಗಮಿಸಿ ನೂತನ ಶಿಲಾಮಯ ಕಟ್ಟೆಯನ್ನು ಲೋಕಾರ್ಪಣೆಗೊಳಿಸಿ ಜಾತ್ರೆಗೆ ಮೆರಗು ನೀಡುತ್ತಿರುವುದು ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿದೆ

         ಸಕಲ ಭಕ್ತರ ಇಷ್ಟವನ್ನು ಪೂರೈಸುವ ದೇವರು ಪ್ರತಿವರ್ಷವು ಕೂಡಾ ತನ್ನ ಛಾಪವನ್ನು ಮೂಡಿಸಿ, ಸೋಣೆಆರತಿ, ಹೂವಿನ ಪೂಜೆ, ಕಿರಿಯ ರಂಗಪೂಜೆ, ಹಿರಿಯ ರಂಗ ಪೂಜೆಗಳಂತಹ ಸೇವೆಯನ್ನು ಪಡೆದು ನಂಬಿದವರ ಇಷ್ಟಾರ್ಥವನ್ನು ಪೂರೈಸುವ ಒಡೆಯನಾಗಿ ಉಪ್ಪಿನಕುದ್ರುವಿನಲ್ಲಿ ನೆಲೆಸಿರುವ ಶ್ರೀ ಗೋಪಾಲಕೃಷ್ಣನ ಮಹಿಮೆಯಾಗಿದೆ.

         ಇಂದು ಶ್ರೀ ರಮೇಶ ಕಾರಂತರ ಅಧ್ಯಕ್ಷತೆಯಲ್ಲಿ ಯುವ ನಾಯಕ ಶ್ರೀ ರಾಜೇಶ ಕಾರಂತರ ಉಪಾಧ್ಯಕ್ಷತೆಯಲ್ಲಿ ದೇವಾಲಯವು ಉಚ್ಚ್ರಾಯ ಸ್ಥಿತಿಯನ್ನು ತಲುಪಿದೆ. ಇದಕ್ಕೆ ಪೂರಕವಾದಂತಹ ಭಕ್ತ ವೃಂದ ಮತ್ತು ಆಡಳಿತ ಮಂಡಳಿಯು ಸದಾ ರಾಜೇಶ್‌ ಕಾರಂತರ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಲು ಹರ್ಷವಾಗುತ್ತದೆ

ಬರಹ : ಮಂಜುನಾಧ ಹೆಬ್ಬಾರ್‌  ಉಪ್ಪಿನಕುದ್ರು

   

Related Articles

error: Content is protected !!