ನಾಳೆ ಅಮಿತ್ ಶಾ ಮಂಗಳೂರಿಗೆ
ಮಂಗಳೂರು: ಕೇಂದ್ರ ಸರಕಾರದ ಗೃಹ ಹಾಗೂ ಸಹಕಾರ ಇಲಾಖೆಯ ಸಚಿವರಾದ ಅಮಿತ್ ಶಾ ಅವರು ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದು ಪುತ್ತೂರಿನ ತೆಂಕಿಲದಲ್ಲಿ ಬೃಹತ್ ಸಹಕಾರಿ ಸದಸ್ಯರ ಸಮಾವೇಶ ನಡೆಯಲಿದೆ. ಈಗಾಗಲೇ ಸಮಾವೇಶದ ಪೂರ್ವಭಾವಿ ಸಭೆಯು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ|| ಎಮ್. ಎನ್. ರಾಜೇಂದ್ರ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರಗಿದ್ದು, ಸುಮಾರು 35 ಸಾವಿರ ದಿಂದ 40 ಸಾವಿರ ಸಹಕಾರಿ ಸದಸ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಹಕಾರಿ ಸಮಾವೇಶವು ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಡಾ|| ಎಮ್. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಅಮಿತ್ ಶಾ ಪ್ರವಾಸ
ಫೆ.11ರಂದು ಮಧ್ಯಾಹ್ನ 2.50ಕ್ಕೆ ಕಣ್ಣೂರಿನಿಂದ ಆಗಮಿಸಿ 3.15ಕ್ಕೆ ಈಶ್ವರಮಂಗಲದಲ್ಲಿ ಇಳಿಯಲಿದ್ದಾರೆ ಹನುಮಗಿರಿ ಅಮರಗಿರಿ ಭೇಟಿ ಮುಗಿಸಿ 3.40ಕ್ಕೆ ಪುತ್ತೂರಿಗೆ ಹೊರಡಲಿದ್ದಾರೆ ಸಂಜೆ 5.30ರವರೆಗೆ ಪುತ್ತೂರು ತೆಂಕಿಲ ಮೈದಾನದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ 5.40ಕ್ಕೆ ಪುತ್ತೂರಿನಿಂದ ಹೊರಟು 6.00ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದು 6.15ರಿಂದ 8.00ಗಂಟೆಯವರೆಗೆ ಮಂಗಳೂರಿನಲ್ಲಿ ಇರಲಿದ್ದಾರೆ