ನವದೆಹಲಿ : ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಜೀವಿತಾವಧಿಯ ಉಳಿತಾಯವನ್ನು ಕಸಿದುಕೊ ಳ್ಳಲು ಸಂಪತ್ತು ಸಮೀಕ್ಷೆ ನಡೆಸಲಿದೆ. ಬಳಿಕ ಆ ಆಸ್ತಿಯನ್ನು ಎಲ್ಲರಿಗೂ ಹಂಚಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾನುವಾರದ ಆರೋಪವನ್ನು ಪುನರುಚ್ಚರಿಸಿದ್ದಾರೆ.
ಉತ್ತರ ಪ್ರದೇಶದ ಅಲಿಗಢದಲ್ಲಿ ಸೋಮವಾರ ಬಿಜೆಪಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ನಿಮ್ಮ ಉಳಿತಾಯದ ಹಣದ ಮೇಲೂ ಕಣ್ಣಿಟ್ಟು ಅದನ್ನು ಕಸಿದುಕೊಳ್ಳಲಿದೆ. ಕಾಂಗ್ರೆಸ್ ಆಡಳಿತದಲ್ಲಿ ನಿಮ್ಮ ಮಂಗಳಸೂತ್ರ ಹಾಗೂ ನಿಮ್ಮ ಮನೆಯೂ ಸುರಕ್ಷಿತವಾಗಿರುವುದಿಲ್ಲ’ ಎಂದರು. ಆದರೆ ಭಾನುವಾರದಂತೆ ತಮ್ಮ ಭಾಷಣದಲ್ಲಿ ಅವರು ಯಾವುದೇ ಜಾತಿ-ಧರ್ಮದ ಹೆಸರು ಹೇಳಲಿಲ್ಲ.