ಅಯೋಧ್ಯೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿತ ರಾಮ ಮಂದಿರಕ್ಕೆ ಇಂದು ಬುಧವಾರ ಭೇಟಿ ನೀಡಲಿದ್ದಾರೆ. ಇದು ದೇಗುಲಕ್ಕೆ ಅವರ ಮೊದಲ ಭೇಟಿಯಾಗಿದೆ.
ಅಯೋಧ್ಯೆಗೆ ಬುಧವಾರ ಸಂಜೆ 4 ಗಂಟೆಗೆ ಅಯೋಧ್ಯೆಗೆ ಆಗಮಿಸುವ ಮುರ್ಮು ಅವರನ್ನು ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಸ್ವಾಗತಿಸಲಿದ್ದಾರೆ.
ತದನಂತರ ದೇಗುಲಕ್ಕೆ ಆಗಮಿಸಲಿರುವ ಮುರ್ಮು ಬಾಲರಾಮನ ದರ್ಶನ ಪಡೆಯಲಿದ್ದಾರೆ. ನಂತರ ಸಂಜೆ ವೇಳೆ ಸರಯೂ ನದಿಯ ದಡದಲ್ಲಿ ನಡೆಯುವ ಆರತಿ ಉತ್ಸವದಲ್ಲಿ ರಾಷ್ಟ್ರಪತಿ ಆತಿಥ್ಯ ವಹಿಸಲಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಬುಡಕಟ್ಟು ಮಹಿಳೆ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಲಿಲ್ಲ. ಎಂದು ಕಾಂಗ್ರೆಸ್ ಸೇರಿದಂತೆ ಇನ್ನಿತರೆ ಪಕ್ಷಗಳು ಟೀಕಿಸಿದ್ದವು.