ನವದೆಹಲಿ : ಪ್ರಧಾನಿ ಮೋದಿ ಅವರು ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿಯುತ್ತಿದ್ದಂತೆಯೇ ಮೇ 30 ರಿಂದ ಜೂ.1ರವರೆಗೆ ಕನ್ಯಾಕುಮಾರಿಯಲ್ಲಿ ತಂಗಲಿದ್ದು ಅಲ್ಲಿ 3 ದಿನ ಧ್ಯಾನ ನಡೆಸಲಿದ್ದಾರೆ. ಕನ್ಯಾಕುಮಾರಿಯಲ್ಲಿ ಈ ಹಿಂದೆ ಧ್ಯಾನಾಸಕ್ತರಾಗಿದ್ದ ಸ್ವಾಮಿ ವಿವೇಕಾನಂದರು ತಮ್ಮ ದಿವ್ಯ ದೃಷ್ಟಿಯಿಂದ ಭಾರತ ಮಾತೆಯನ್ನು ಕಂಡರು ಎಂದು ಹೇಳಲಾದ ವಿವೇಕಾನಂದ ರಾಕ್ ಮೆಮೋರಿಯಲ್ ಧ್ಯಾನ ಮಂಟಪದಲ್ಲಿ ಮೋದಿ ಅವರು ಧ್ಯಾನಾಸಕ್ತರಾಗಲಿದ್ದಾರೆ.
ಮೇ 30ರ ಸಂಜೆಯಿಂದ ಜೂ.1ರ ಸಂಜೆಯವರೆಗೆ ಅವರು ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಜೂ.1ರ ಸಂಜೆ ಅವರು ದಿಲ್ಲಿಗೆ ನಿರ್ಗಮಿಸಲಿದ್ದಾರೆ. ಆ ಹೊತ್ತಿಗೆ ಮೋದಿ ಅವರ ತವರು ಕ್ಷೇತ್ರ ವಾರಾಣಸಿ ಸೇರಿದಂತೆ ದೇಶದೆಲ್ಲೆಡೆ ಕೊನೆಯ ಚರಣದ ಮತದಾನವೂ ಮುಗಿದಿರುತ್ತದೆ.
ಈ ಹಿಂದೆ ಮೋದಿ 2019ರ ಲೋಕಸಭೆ ಚುನಾವಣೆ ಮುಗಿದ ಬಳಿಕ ಕೇದಾರನಾಥಕ್ಕೆ ತೆರಳಿ ಅಲ್ಲಿನ ಗುಹೆಯಲ್ಲಿ ಧ್ಯಾನಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು