ಕನ್ಯಾಕುಮಾರಿ: ಲೋಕಸಭೆ ಚುನಾವಣೆಯ ಕೊನೆಯ ಹಂತದ ಪ್ರಚಾರಕ್ಕೆ ತೆರೆ ಬೀಳು ತ್ತಿದ್ದಂತೆಯೇ ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯಲ್ಲಿರುವ ಪ್ರಸಿದ್ದ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 45 ಗಂಟೆಗಳ ಸುದೀರ್ಘ ಧ್ಯಾನ ಆರಂಭಿಸಿದರು. ನಗರಕ್ಕೆ ಸಂಜೆ 5 ಗಂಟೆಗೆ ಆಗಮಿಸಿದ ಪ್ರಧಾನಿ, ವಿವೇಕಾನಂದ ಶಿಲಾ ಸ್ಮಾರಕಕ್ಕೆ ತೆರಳುವ ಮೊದಲು ಬಿಳಿ ಅಂಗಿ, ಶಲ್ಯ ಮತ್ತು ಪಂಚೆ ಧರಿಸಿ ಭಗವತಿ ಅಮ್ಮನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
1892ರಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಶಿಲಾ ಸ್ಮಾರಕದಲ್ಲಿ ಗುರುವಾರ ಸಂಜೆಯಿಂದ ಶನಿವಾರ (ಜೂನ್ 1) ಸಂಜೆಯವರೆಗೆ ಮೋದಿ ಧ್ಯಾನಾಸಕ್ತರಾಗುವರು
ತಿರುವನಂತಪುರಂನಿಂದ ಕನ್ಯಾಕುಮಾರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ, ಅಲ್ಲಿಂದ ಧ್ಯಾನ ಮಂಟಪಕ್ಕೆ ಸಾಮಾನ್ಯ ಜನರು ಸಂಚರಿಸುವ ದೋಣಿಯಲ್ಲಿಯೇ ತೆರಳಿದರು.