Home » ದಶಕದ ಬಳಿಕ ಕೈಗೆ ಪ್ರತಿಪಕ್ಷ ಸ್ಥಾನ
 

ದಶಕದ ಬಳಿಕ ಕೈಗೆ ಪ್ರತಿಪಕ್ಷ ಸ್ಥಾನ

by Kundapur Xpress
Spread the love

ನವದೆಹಲಿ : 2014 , 2019ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷ ಸ್ಥಾನವನ್ನೂ ಕಳೆದುಕೊಂಡಿದ್ದ ಕಾಂಗ್ರೆಸ್ 10 ವರ್ಷಗಳ ಬಳಿಕ ಮರಳಿ ಆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಪಕ್ಷ 55ಕ್ಕಿಂತ ಹೆಚ್ಚು ಸ್ಥಾನ ಪಡೆದಿರುವ ಕಾರಣ ಅದಕ್ಕೆ ಸಂವಿಧಾನಬದ್ಧವಾಗಿ ಅಧಿಕೃತ ಪ್ರತಿಪಕ್ಷ ಸ್ಥಾನ ಪಡೆಯಲಿದೆ.

2014ರಲ್ಲಿ 44 ಮತ್ತು 2019ರಲ್ಲಿ 51 ಸ್ಥಾನ ಮಾತ್ರ ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. 543 ಲೋಕಸಭಾ ಕ್ಷೇತ್ರವಿರುವ ಸಂಸತ್‌ನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಪಡೆಯಬೇಕಾದರೆ ಶೇ.10ರಷ್ಟು ಸ್ಥಾನಗಳಲ್ಲಿ ಜಯ ಸಾಧಿಸಬೇಕು. ಅಂದರೆ 55 ಕ್ಷೇತ್ರಗಳಲ್ಲಿ ಗೆದ್ದರಷ್ಟೇ ಸದನದಲ್ಲಿ ಪ್ರತಿಪಕ್ಷ ಸ್ಥಾನಮಾನ ಸಿಗಲಿದೆ. ಸಂಸತ್‌ನಲ್ಲಿ ಪ್ರತಿ ಪಕ್ಷದ ನಾಯಕನಿಗೆ ಕೇಂದ್ರ ಸಚಿವ ಸಂಪುಟ ದರ್ಜೆಯ ಸ್ಥಾನಮಾನವಿರುತ್ತದೆ.

   

Related Articles

error: Content is protected !!