ಕಾಪು : ಕಾಪುವಿನ ಲೈಟ್ ಹೌಸ್ ಬೀಚ್ ಬಳಿ ಯುವಕನೋರ್ವ ಬೈಕ್, ಮೊಬೈಲ್ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಬಿಟ್ಟು ಗುರುವಾರ ನಾಪತ್ತೆಯಾಗಿದ್ದು, ಶುಕ್ರವಾರ ಆತನ ಶವ ಪತ್ತೆಯಾಗಿದೆ.
20ರ ಹರೆಯದ ಕರಣ್ ಸಾಲ್ಯಾನ್ ಸಾವನ್ನಪ್ಪಿದ ಯುವಕ ಗುರುವಾರ ರಾತ್ರಿ ನಾಪತ್ತೆಯಾಗಿದ್ದು ಶುಕ್ರವಾರ ಬೆಳಿಗ್ಗೆ ಹುಡುಕಿದಾಗ ಕಾಪು ಬೀಚ್ ಬಳಿಯ ಶ್ರೀಯಾನ ಸದನದ ಬಳಿ ಬೈಕ್, ಮೊಬೈಲ್ ಪರ್ಸ್ ಪತ್ತೆ ಆಗಿದೆ. ಪುತ್ರ ನಾಪತ್ತೆಯಾಗಿದ್ದ ಬಗ್ಗೆ ತಂದೆ ತುಳಸಿ ಸಾಲ್ಮಾನ್ ಕಾಪು ಠಾಣೆಗೆ ದೂರು ನೀಡಿದ್ದರು.
ಕರಣ್ ಸಾಲ್ಯಾನ್ (20) ನ ಮೃತದೇಹ ಕಡೆಕಾರು- ಪಡುಕೆರೆ ಬಳಿಯ ಸಮುದ್ರದಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಪತ್ತೆಯಾಗಿದೆ.ಸ್ಥಳೀಯರು, ಈಜುಗಾರರು ಶುಕ್ರವಾರ ಬೆಳಗಿನಿಂದಲೇ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದು ಸಂಜೆಯ ವೇಳೆ ಮಲ್ಲೆ ಬಳಿಯ ಪಡುಕೆರೆ ಕಡೆಕಾರು ಸಮುದ್ರದಲ್ಲಿ ಮೃತದೇಹವೊಂದು ತೇಲುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಸ್ಥಳೀಯರು ಮೃತದೇಹವನ್ನು ಸಮುದ್ರದಿಂದ ಹೊರತೆಗೆದಿದ್ದಾರೆ
ಕರಣ್ ಕುಟುಂಬಿಕರು ಘಟನಾ ಸ್ಥಳಕ್ಕೆ ತೆರಳ ಮೃತದೇಹದ ಗುರುತು ಪತ್ತೆ ಮಾಡಿದ್ದಾರೆ. ಕಾಪುವಿನ ಸಮಾಜಸೇವಕ ಸೂರಿ ಶೆಟ್ಟಿಯವರು ಮೃತದೇಹವನ್ನು ಉಡುಪಿ ಅಜ್ಜರ ಕಾಡು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಈ ಬಗ್ಗೆ ಮಲ್ಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ