ಕುಂದಾಪುರ : ನಗರದ ರಾಷ್ಟ್ರೀಯ ಹೆದ್ದಾರಿ ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ್ ಬಳಿಯ ನಿವಾಸಿಯಾಗಿರುವ ಯೋಗ ಬಂಧು ಸಂಜೀವಣ್ಣನವರು ಇಂದು ಮುಂಜಾನೆ 1.00 ಗಂಟೆಯ ಸುಮಾರಿಗೆ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು 60 ವರ್ಷ ಪ್ರಾಯದ ಅವರು ಪತ್ನಿ ಪುತ್ರ ಹಾಗೂ ಸಾವಿರಾರು ಯೋಗಬಂಧುಗಳನ್ನು ಅಗಲಿದ್ದಾರೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು
ಉಡುಪಿಯ ಹಾವಂಜೆ ಗ್ರಾಮದ ಮೊಗೇರಿ ಎಂಬಲ್ಲಿ ಕೆ ಕೆ ಪೂಜಾರಿ ಹಾಗೂ ಪೂವಮ್ಮ ದಂಪತಿಯ ಪುತ್ರನಾದ ಸಂಜೀವಣ್ಣನವರು ತನ್ನ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಕುಕ್ಕಿಕಟ್ಟೆಯ ಜೈಹಿಂದ್ ಹಿ ಪ್ರಾ ಶಾಲೆ ಹೈಸ್ಕೂಲ್ ಶಿಕ್ಷಣವನ್ನು ಚೇರ್ಕಾಡಿಯ ಶಾರದ ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಣವನ್ನು ಉಡುಪಿಯ ಜೂನಿಯರ್ ಕಾಲೇಜಿನಲ್ಲಿ ಮುಗಿಸಿ ಮಣಿಪಾಲದ ಕೆ ಎಂ ಸಿಯಲ್ಲಿ ವೈದ್ಯಕೀಯ ದಾಖಲೆಗಳ ತಜ್ಞ ಕೋರ್ಸ್‌ನ್ನು ಮುಗಿಸಿ ಕೆಎಂಸಿ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಕಾಲ ಅಲ್ಲಿಯೇ ಸೇವೆ ಸಲ್ಲಿಸಿ 1984ರ ಎಪ್ರಿಲ್ 1 ರಂದು ಕುಂದಾಪುರದ ಆದರ್ಶ ಆಸ್ಪತ್ರೆ ಸೇರಿ ಇಂದಿನವರೆಗೂ ಸೇವೆ ಸಲ್ಲಿಸಿದ್ದಾರೆ

ಸರ್ವೇ ಜನಾಃ ಸುಖಿನೋ ಭವತು ಎನ್ನುವಂತೆ ಸಮಾಜದ ಸರ್ವರೂ ಆರೋಗ್ಯವಂತರಾಗಬೇಕು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಬೇಕು ಎಂಬ ನಿಟ್ಟಿನಲ್ಲಿ ಯೋಗ ಧ್ಯಾನ ಮತ್ತು ಯೋಗಾಸನಗಳಲ್ಲಿ ಸಾಧನೆಯನ್ನು ಮಾಡಿ ಅದರಲ್ಲಿ ಸಾವಿರಾರು ಜನರಿಗೆ ಮಾರ್ಗದರ್ಶನ ಮಾಡಿರುವುದು ಅವರ ಸಮಾಜ ಸೇವೆಗೆ ಸಾಕ್ಷಿಯಾಗಿದೆ ಈವೊಂದು ಸಮಾಜ ಸೇವೆಗಾಗಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಕೂಡ ದೊರೆತಿದೆ
ನಿಧನಕ್ಕೆ ಸಂತಾಪ
ಸರಳ ಸೌಮ್ಯ ಸ್ವಭಾವದ ಕರ್ಮಯೋಗಿ ಯೋಗ ಬಂಧು ಸಂಜೀವಣ್ಣನವರ ನಿಧನಕ್ಕೆ ಕುಂದಾಪುರ ಆದರ್ಶ ಆಸ್ಪತ್ರೆಯ ಆಡಳಿತ ನಿರ್ಧೇಶಕರಾದ ಆದರ್ಶ ಹೆಬ್ಬಾರ್ ಕಂಬನಿ ಮಿಡಿದಿದ್ದು ಆದರ್ಶ ಅಸ್ಪತ್ರೆಯ ಸಿಬ್ಬಂದಿ ವರ್ಗದವರು ಅಪಾರ ಸಂತಾಪ ವ್ಯಕ್ತಪಡಿಸಿದ್ದಾರೆ

