Home » ಸಂತೆಕಟ್ಟೆ : ಉರುಳಿ ಬಿದ್ದ ಟ್ಯಾಂಕರ್
 

ಸಂತೆಕಟ್ಟೆ : ಉರುಳಿ ಬಿದ್ದ ಟ್ಯಾಂಕರ್

by Kundapur Xpress
Spread the love

ಉಡುಪಿ : ಉಡುಪಿ- ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್‌ಪಾಸ್‌ನಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮಣ್ಣು ಕುಸಿದು ಟ್ಯಾಂಕರ್ ಉರುಳಿ ಬಿದ್ದಿದೆ. ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ನೇರವಾಗಿ ಅಂಡರ್‌ಪಾಸ್‌ನಲ್ಲಿ ಹೋಗುವ ಬದಲು, ಮಾರ್ಗ ಅದಲು ಬದಲಾಗಿ ಸಂತೆಕಟ್ಟೆ ಜಂಕ್ಷನ್‌ಗೆ ಹೋಗಿತ್ತು

ಈ ಮಾರ್ಗದಲ್ಲಿ ಅಂಡರ್‌ಪಾಸ್‌ನ ಕಾಮಗಾರಿ ನಡೆಯುತ್ತಿದ್ದು, ಮಣ್ಣನ್ನು ತೆರೆವುಗೊಳಿಸಿ ಹೊಂಡ ನಿರ್ಮಿಸಲಾಗಿದೆ. ಟ್ಯಾಂಕರ್ ಚಲಾಯಿಸಿಕೊಂಡು ಹೋಗುತ್ತಿದ್ದಂತೆ ಮಣ್ಣು ಜರಿದು ಅಂಡರ್‌ಪಾಸ್‌ ಕಾಮಗಾರಿಯ ಹೊಂಡಕ್ಕೆ ಮಗುಚಿ ಬಿದ್ದಿದೆ. ಘಟನೆಯಿಂದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ

   

Related Articles

error: Content is protected !!