Home » ಬಸ್‌ಗೆ ಭಯೋತ್ಪಾದಕರ ದಾಳಿ
 

ಬಸ್‌ಗೆ ಭಯೋತ್ಪಾದಕರ ದಾಳಿ

by Kundapur Xpress
Spread the love

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ವೈಷ್ಟೋದೇವಿ ಯಾತ್ರೆಗೆ ತೆರಳುತ್ತಿದ್ದ ಹಿಂದೂಗಳ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. 33 ಮಂದಿ ಗಾಯಗೊಂಡಿದ್ದಾರೆ.ಭಯೋತ್ಪಾದಕರ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಬಸ್ಸಿನ ಚಾಲಕ ಯತ್ನಿಸಿದಾಗ ಬಸ್ ಪ್ರಪಾತಕ್ಕೆ ಉರುಳಿದೆ. ಭಾನುವಾರ ಸಂಜೆ 6.10ರ ಸಮಯದಲ್ಲಿ ಘಟನೆ ನಡೆದಿದೆ

ಯಾತ್ರಾರ್ಥಿಗಳು ಶಿವಖೋಡಿಯ ಗುಹಾ ದೇವಾಲಯದಿಂದ ವೈಷ್ಟೋದೇವಿಯ ಕ್ಷೇತ್ರವಾದ ಕಟ್ರಾಗೆ ತೆರಳುತ್ತಿದ್ದರು. ಆಗ ರಸ್ತೆಯ ಪಕ್ಕದ ಅರಣ್ಯದಲ್ಲಿ ಅವಿತಿದ್ದ ಉಗ್ರರು, ಜಮ್ಮು ನೋಂದಣಿ ಸಂಖ್ಯೆಯ ಬಸ್ಸಿಗೆ ಗುಂಡಿನ ದಾಳಿ ಮಾಡಿದ್ದಾರೆ.ದಾಳಿಯಿಂದ ಬಚಾವಾಗಲು ಹೋಗಿ ಬಸ್ಸು ಕಂದಕಕ್ಕೆ ಉರುಳಿದೆ. ಡಿಕ್ಕಿಯ ರಭಸಕ್ಕೆ ಬಸ್ ಗೆ ತೀವ್ರ ಹಾನಿಯಾಗಿದ್ದು, ಅಪಘಾತದ ಸ್ಥಳದಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ

   

Related Articles

error: Content is protected !!