Home » ಪೊಲೀಸರಿಂದ ರಿಮ್ಯಾಂಡ್ ಅಪ್ಲಿಕೇಷನ್
 

ಪೊಲೀಸರಿಂದ ರಿಮ್ಯಾಂಡ್ ಅಪ್ಲಿಕೇಷನ್

ಕೊಲೆ ಕೃತ್ಯದಲ್ಲಿ 17 ಆರೋಪಿಗಳು

by Kundapur Xpress
Spread the love

ಬೆಂಗಳೂರು : ಚಿತ್ರದರ್ಗದ ರೇಣುಕಾ ಸ್ವಾಮಿ ಕೊಲೆ ಕೃತ್ಯದಲ್ಲಿ ನಟ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಪಾಲ್ಗೊಂಡಿದ್ದಾರೆ ಎಂದು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಪೊಲೀಸರು ಹೇಳಿದ್ದಾರೆ. ಈ ಕೃತ್ಯದಲ್ಲಿ ದರ್ಶನ್ ಸೇರಿ 13 ಮಂದಿ ಬಂಧಿತರಾಗಿದ್ದು, ಇನ್ನುಳಿದ ನಾಲ್ವರ ಪತ್ತೆಗೆ ತನಿಖೆ ಮುಂದುವರೆದಿದೆ. 

ಕೊಲೆ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಸಲುವಾಗಿ ಬಂಧಿತರಾಗಿದ್ದ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಮಂಗಳವಾರೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದರು. ಇದರಲ್ಲಿ 17 ಮಂದಿ ಆರೋಪಿಗಳ ವಿವರ ಬಹಿರಂಗಪಡಿಸಿದ್ದಾರೆ.

ಇನ್ನು ಈ ಆರೋಪಿಗಳ ಪೈಕಿ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯಕ್ ಹಾಗೂ ಕೇಶವ ಮೂರ್ತಿ ಶರಣಾಗಿದ್ದರು. ಈ ನಾಲ್ವರ ಹೇಳಿಕೆ ಆಧರಿಸಿ ರಾಜರಾಜೇಶ್ವರಿ ನಗರದ ಪ್ರವೇಶ ದ್ವಾರದ ಬಳಿ ವಿನಯ್, ದೀಪಕ್, ಬಿಡದಿ ಟೋಲ್ ಸಮೀಪ ಪವನ್, ನಂದೀಶ್, ನಾಗರಾಜ್, ಲಕ್ಷ್ಮಣ್ ಹಾಗೂ ಪ್ರದೋಶ್ ಪೊಲೀಸರ ಬಲೆಗೆ ಬಿದ್ದಿದ್ದರು. ಮೈಸೂರಿನಲ್ಲಿ ದರ್ಶನ್ ಹಾಗೂ ಆ‌ರ್.ಆ‌ರ್.ನಗರದ ಮನೆಯಲ್ಲಿ ಪವಿತ್ರಾ ಗೌಡಳನ್ನು ಪೊಲೀಸರು ಬಂಧಿಸಿದ್ದರು. ಹಗ್ಗ ದೊಣ್ಣೆ ಹಾಗೂ ಮರದ ತುಂಡುಗಳಿಂದ ಆರೋಪಿಗಳು ಹಲ್ಲೆ ನಡೆಸಿದ್ದಾರೆ

   

Related Articles

error: Content is protected !!