249
ಅನಧಿಕೃತವಾಗಿ ಸಾಗುತ್ತಿದ ಅಕ್ಕಿ ವಶ
ಕೋಟ: ಯಾವುದೇ ದಾಖಲೆಯಿಲ್ಲದೇ ಟಾಟಾ ಎಸ್ ವಾಹನದಲ್ಲಿ ಸಾಗಿಸುತ್ತಿದ 40 ಕೆ.ಜಿ ತೂಕದ 17 ಅಕ್ಕಿ ಚೀಲಗಳನ್ನು ಕೋಟ ಪೋಲಿಸರು ವಶಪಡಿಸಿಕೊಂಡಿದ್ದಾರೆ .ಬಿಲ್ಲಾಡಿ ಕಡೆಯಿಂದ ಕೋಟಾ ಕಡೆಗೆ ಬರುತ್ತಿದ್ದ ಟಾಟಾ ಎಸ್ ಗಾಡಿಯನ್ನು ಸೈಬ್ರಕಟ್ಟೆ ಚೆಕ್ ಪೋಸ್ಟ್ ಬಳಿ ನಿಲ್ಲಿಸಿ ತಪಾಸಿಸಿದಾಗ ವಾಹನದ ಹಿಂಬದಿ 680 ಕೆಜಿ ಯ 20,400 ಮೌಲ್ಯದ ಅಕ್ಕಿಯಚೀಲವನ್ನು ದಾಖಲೆ ಇಲ್ಲದೇ ಸಾಗಿಸುತ್ತಿರುವುದರಿಂದ ಅಕ್ಕಿ ಹಾಗೂ 1 ಲಕ್ಷ ಮೌಲ್ಯದ ಟಾಟಾ ಎಸ್ ವಾಹನವನ್ನು ಸ್ವಾಧೀನ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

