Home » ಅಪಘಾತ : ಕಾರಿನಿಂದ ಬೇರ್ಪಟ್ಟ ಇಂಜಿನ್
 

ಅಪಘಾತ : ಕಾರಿನಿಂದ ಬೇರ್ಪಟ್ಟ ಇಂಜಿನ್

by Kundapur Xpress
Spread the love

ಉಡುಪಿ : ಉಡುಪಿ ಸಮೀಪದ ಅಂಬಾಗಿಲಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ  ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದು  ಪಲ್ಟಿಯಾಗಿದೆ ಅಪಘಾತದ ರಭಸಕ್ಕೆ ಕಾರಿನ ಇಂಜಿನ್‌ ಕಾರಿನಿಂದ ಬೇರ್ಪಡೆಯಾಗಿ ನೆಲಕ್ಕುರುಳಿದೆ ಈ  ಘಟನೆ ಉಡುಪಿ ಅಂಬಾಗಿಲುವಿನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ

ಭಟ್ಕಳದಿಂದ ಮಂಗಳೂರಿನತ್ತ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ  ಎಂದು ತಿಳಿದು ಬಂದಿದೆ

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕಾರಿನ ಭಾಗಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ ಕಾರಿನ ಇಂಜಿನ್ ಮಾರುದ್ದ ಹೋಗಿ ಬಿದ್ದಿದೆ. ಅಪಘಾತಕ್ಕೆ ಚಾಲಕನ ಅತಿವೇಗದ ಚಾಲನೆ ಎನ್ನಲಾಗಿದೆ. ಉಡುಪಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ

   

Related Articles

error: Content is protected !!