ವಾರಾಣಸಿ : ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದ ಪ್ರಧಾನ ಅರ್ಚಕ ಆಚಾರ್ಯ – ಲಕ್ಷ್ಮೀಕಾಂತ್ ದೀಕ್ಷಿತ್ ಶನಿವಾರ ಬೆಳಗ್ಗೆ ನಿಧನರಾದರು. ದೀಕ್ಷಿತ್ (86ವರ್ಷ) ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ವಾರಾಣಸಿಯ ಹಿರಿಯ ವಿದ್ವಾಂಸರಲ್ಲಿ ಒಬ್ಬರಾಗಿದ್ದ ದೀಕ್ಷಿತ್ ಮೂಲತಃ ಮಹಾರಾಷ್ಟ್ರದ ಸೋಲಾಪುರದವರು. ಆದರೆ ಅವರ ಕುಟುಂಬ ಹಲವಾರು ತಲೆಮಾರುಗಳಿಂದ ವಾರಾಣಸಿಯಲ್ಲಿ ನೆಲೆಸಿತ್ತು