ನವದೆಹಲಿ: ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದು, ತಮ್ಮ ಗೌರವ ನಮನ ಸಲ್ಲಿಸಿದ್ದಾರೆ. ಗುರುವಾರ ಟ್ವಿಟ್ ಮಾಡಿರುವ ಅವರು, ‘ಕೆಂಪೇಗೌಡರು ದೂರದೃಷ್ಟಿ ಮತ್ತು ಆಡಳಿತಾತ್ಮಕ ಕೌಶಲ್ಯಗಳಿಗೆ ಹೆಸರುವಾಸಿಯಾದ ದಾರ್ಶನಿಕರಾಗಿದ್ದರು. ಆರ್ಥಿಕ ಹಿತ ಚಿಂತನೆ, ಕೃಷಿ, ನೀರಾವರಿ ಮುಂತಾದವುಗಳ ಸುಧಾರಣೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅವರು ಕಟ್ಟಿದ ಬೆಂಗಳೂರು ನಗರ ತನ್ನ ಚಲನಶೀಲತೆ, ಹುರುಪು ಮತ್ತು ನಾವೀನ್ಯತೆಗಾಗಿ ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ. ಸಮಾಜದ ಬಗ್ಗೆ ಕೆಂಪೇಗೌಡರ ದೂರದೃಷ್ಟಿಯನ್ನು ನನಸಾಗಿಸಲು ಮತ್ತು ಅವರು ಪೋಷಿಸಿದ ಮೌಲ್ಯಗಳನ್ನು ಎತ್ತಿಹಿಡಿಯಲು ನಮ್ಮ ಸರ್ಕಾರ ಕೆಲಸ ಮಾಡುತ್ತಲೇ ಇರುತ್ತದೆ’ ಎಂದಿದ್ದಾರೆ