ಕೋಟ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿವಿಧ ಆಯಾಮಗಳಲ್ಲಿ ವಿಕಾಸಗೊಳ್ಳಲು ವೈವಿಧ್ಯಮಯ ಅವಕಾಶ ಒದಗಿಸುತ್ತಿರುವ ಹೆಸಕುತ್ತೂರು ಪ್ರಾಥಮಿಕ ಶಾಲೆಯ ಪ್ರಯತ್ನ ಅಭಿನಂದನೀಯ ಎಂದು ನಿವೃತ್ತ ಮುಖ್ಯ ಶಿಕ್ಷಕರಾದ ಸುಬ್ಬಣ್ಣ ಶೆಟ್ಟಿ ಹುಣಸೆಮಕ್ಕಿ ನುಡಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಇಲ್ಲಿ ನೂತನವಾಗಿ ಆರಂಭಿಸಲಾದ ಅಬಾಕಸ್ ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕ್ರಷ್ಣ ಕೆದ್ಲಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಪಿಡ್ ಇನ್ಸ್ಟಿಟ್ಯೂಟ್ ಓಫ್ ಅಬಾಕಸ್ನ ಪ್ರಿನ್ಸಿಪಾಲರಾದ ಸುನೀತಾ ಹೆಬ್ಬಾರ್ ಅಬಾಕಸ್ ತರಗತಿಯ ಸ್ವರೂಪದ ಕುರಿತು ಮಾತನಾಡಿದರು. ಶಾಲಾ ಸಹ ಶಿಕ್ಷಕರಾದ ಸಂಜೀವ ಎಂ, ವಿಜಯಾ ಆರ್, ವಿಜಯ ಶೆಟ್ಟಿ, ರವೀಂದ್ರ ನಾಯಕ್, ಸ್ವಾತಿ ಬಿ, ಗೌರವ ಶಿಕ್ಷಕಿ ಮಧುರ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್ ಸ್ವಾಗತಿಸಿದರು. ಜಯಲಕ್ಷ್ಮಿ ಬಿ ವಂದಿಸಿದರು. ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.