Home » ರಸ್ತೆ ಚರಂಡಿ ಅವ್ಯವಸ್ಥೆ
 

ರಸ್ತೆ ಚರಂಡಿ ಅವ್ಯವಸ್ಥೆ

ಮನೆಗೆ ನುಗ್ಗಿದ ನೀರು

by Kundapur Xpress
Spread the love

ಕುಂದಾಪುರ : ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ವ್ಯಾಪ್ತಿಯ ಗುಜ್ಜಾಡಿ ಗ್ರಾಮ ಪಂಚಾಯಿತಿನ ಮಾವಿನ ಕಟ್ಟೆ ನಾಯಕವಾಡಿ ಜನತಾ ಕಾಲೋನಿ ಮುಳ್ಳಿಕಟ್ಟೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ದಿನನಿತ್ಯ  ಶಾಲೆಗೆ ಹೋಗುವ ಮಕ್ಕಳು ಹಾಗೂ ಮೀನುಗಾರಿಕೆ ಕೆಲಸಕ್ಕೆ ಹೋಗುವರು, ಮತ್ತು ಜನತಾ ಕಾಲೋನಿಯ ಗಂಡಸರು ಮಹಿಳೆಯರು ಕೆಲಸಕ್ಕೆ ಹೋಗಿ ಬರುವವರ ಸಂಚಾರದ ಮುಖ್ಯ ರಸ್ತೆ ಇದಾಗಿದೆ

ಗುಜ್ಜಾಡಿ ಗ್ರಾಮ ಪಂಚಾಯತ್ ಸಂಬಂಧಿಸಿದ ಈ ರಸ್ತೆ ಭಾಗದಲ್ಲಿ ದೊಡ್ಡ ದೊಡ್ಡ ಮರಗಳಿಂದ ಕೂಡಿದ ಹಾಡಿಗಳಿದ್ದು ಮಳೆಗಾಲದಲ್ಲಿ ಈ ಹಾಡಿಯ ಮೂಲಕವೇ ಮಳೆಗಾಲದಲ್ಲಿ ಜನತಾ ಕಾಲೋನಿಯಿಂದ ಹರಿದು ಬಂದ ನೀರು ಹಾಡಿಯ ಮೂಲಕ ಹೋಗಿ ಕೊಡಪಾಡಿ ತೋಡು ಸೇರಿ ನಂತರ ಸಮುದ್ರಕ್ಕೆ ಸೇರುತ್ತಿತ್ತು ಎನ್ನಲಾಗುತ್ತಿದೆ

ಕಳೆದ ಮೂರು ನಾಲ್ಕು ವರ್ಷಗಳಿಂದ ಮಾವಿನಕಟ್ಟೆ ರಸ್ತೆ ಸಮೀಪ ಇರುವ ಗಂಗಾ ಪೂಜಾರ್ತಿಯವರ ಮನೆ ರಸ್ತೆಯ ಚರಂಡಿ ಅವ್ಯವಸ್ಥೆಯಿಂದ ನೀರು ಸಂಪೂರ್ಣ ಬ್ಲಾಕ್ ಆಗಿ ರಸ್ತೆಯ ನೀರು ಮನೆ ಒಳಗೆ ಹರಿದು ಬಂದು ಮನೆ ಸಂಪೂರ್ಣ ಜಲಾವೃತಗೊಂಡಿದ್ದು ಮನೆ ಬೀಳುವ ಪರಿಸ್ಥಿತಿ ಎದುರಾಗಿದೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ದಲಿತ ಮುಖಂಡ ಮಂಜುನಾಥ್ ಮಾವಿನಕಟ್ಟೆ ಗುಜ್ಜಾಡಿ ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕೂಡಲೇ ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳು ಗಮನ ಹರಿಸಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

   

Related Articles

error: Content is protected !!