ಕೋಟ : ಸಾಸ್ತಾನ ಕೋಡಿತಲೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು. ಇತ್ತೀಚಿಗೆ ನಡೆದ ಬರಿಗಾಲಿನ ಪಾದಯಾತ್ರೆಯಲ್ಲಿ ಪ್ರಮುಖವಾಗಿ ದೋಣಿಯಲ್ಲಿ ಸಾಹಸ ಮಾಡಿದ ಸಂತೋಷ ಖಾರ್ವಿ ಹಾಗೂ ಬ್ರಹ್ಮಾವರ ವಲಯದ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಮಡಿ ವಿಶ್ವನಾಥ ಖಾರ್ವಿಯವರ 10ನೇ ವರ್ಷದ ಪಾದಯಾತ್ರೆಯ ಪ್ರಯುಕ್ತ ಶ್ರೀ ದೇವರ ದರ್ಶನ ಪಡೆದು ಪೂಜ್ಯ ಕಾವಂದರ ಆಶೀರ್ವಾದ ಪಡೆಯಲಾಯಿತು. ಒಟ್ಟು ಹನ್ನೊಂದು ಜನರ ತಂಡದಲ್ಲಿ ಸಂದೀಪ ಖಾರ್ವಿ ,ಆನಂದ ಖಾರ್ವಿ ,ಮಂಜುನಾಥ ಖಾರ್ವಿ, ನಾಗರಾಜ ಖಾರ್ವಿ ,ಶರತ್ ಖಾರ್ವಿ, ಪ್ರವೀಣ್ ಖಾರ್ವಿ ಅಜಿತ್ ಖಾರ್ವಿ,ಶಿವರಾಜ್ ಖಾರ್ವಿ ಹಾಗೂ ವಿಜಯ ಖಾರ್ವಿಯವರು ಉಪಸ್ಥಿತರಿದ್ದರು.