Home » ಸಂಸದ ಕೋಟ ಅವರಿಂದ ನೆರೆಹಾವಳಿ ವೀಕ್ಷಣೆ
 

ಸಂಸದ ಕೋಟ ಅವರಿಂದ ನೆರೆಹಾವಳಿ ವೀಕ್ಷಣೆ

by Kundapur Xpress
Spread the love

ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಬನ್ನಾಡಿ, ಅಚ್ಲಾಡಿ,ಕಾವಡಿ,ಕುದ್ರೆಬೆಟ್ಟು,ವಡ್ಡರ್ಸೆ ಮುಂತಾದ ಪ್ರದೇಶಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧಿಕಾರಿಗಳ ಜೊತೆ ಭೇಟಿ ನೀಡಿ ಸಂತ್ರಸ್ತ ಪ್ರದೇಶ ವೀಕ್ಷಣೆ ಮಾಡಿದರು.ಕೆಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕದ ಕೊರತೆಯಿಂದ ನೆರೆಯಿಂದ ಪಾರಾಗಲು ದೋಣಿ ವ್ಯವಸ್ಥೆ ಮಾಡಿ ಎಂದ ಸಾರ್ವಜನಿಕರ ಅಭಿಪ್ರಾಯವನ್ನು ಆಲಿಸಿದರು

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಕೋಟ ಕೆಲವು ಪ್ರದೇಶಗಳಲ್ಲಿ ವಿಪರೀತ ಮಳೆಯ ಕಾರಣಕ್ಕಾಗಿ ಪ್ರವಾಹ ಬಂದಿದ್ದು ಜನರನ್ನು ಸಂರಕ್ಷಣೆ ಮಾಡಲು ಅಗತ್ಯವಿರುವ ಕಡೆಗೆ ದೋಣಿ ಒದಗಿಸಲು ಮತ್ತು ತುರ್ತಾಗಿ ಕಾಳಜಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಯವರಿಗೆ ಸೂಚನೆ ಕೊಟ್ಟರು. ಬೆಂಗಳೂರಿನಲ್ಲಿರುವ ಶಾಸಕರು ಕೂಡ ಸಾರ್ವಜನಿಕರ ಮತ್ತು ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ.

ಪ್ರವಾಹದ ಮಧ್ಯೆ ಜಾಗೃತಾವಸ್ಥೆಯಲ್ಲಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಂಸದರೊಂದಿಗೆ ಉಡುಪಿ ಜಿಲ್ಲಾಧಿಕಾರಿಯವರಾದ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್, ವಿಎ ರಾಘವೇಂದ್ರ,ವಡ್ಡರ್ಸೆ ಪಂಚಾಯತ್ ಅಧ್ಯಕ್ಷರು ಲೋಕೇಶ್, ಪಂಚಾಯತ್ ಸದಸ್ಯರುಗಳಾದ ಕೋಟಿ ಪೂಜಾರಿ, ಹರೀಶ್ ಶೆಟ್ಟಿ, ತೀರ್ಥನ್ ದೇವಾಡಿಗ, ಭಾಸ್ಕರ್ ಪೂಜಾರಿ, ರಮ್ಯಾ, ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

   

Related Articles

error: Content is protected !!