ಹೊಸದಿಲ್ಲಿ : ತೃತೀಯ ಅವಧಿಗೂ ದೇಶದ ಪ್ರಧಾನಿಯಾಗುವಲ್ಲಿ ತುಂಬು ಕೊಡುಗೆ ನೀಡಿದ್ದಕ್ಕಾಗಿ ಕೃತಜ್ಞತೆಗಳು ಎಂದು ಬಿಜೆಪಿ ಪ್ರಧಾನ ಕಾರ್ಯಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಾಲಯದ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. ತೃತೀಯ ಅವಧಿ ಗೆ ಪ್ರಧಾನಿಯಾದ ನಂತರ ಮೋದಿ ತಮ್ಮ ಕಚೇರಿ ಸಹೋದ್ಯೋಗಿಗಳ ಜತೆ ಸಂವಾದ ನಡೆಸಿದ್ದು ಇದೇ ಮೊದಲು. ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ.ನಡ್ಡಾ ಪ್ರಧಾನಿ ಅವರನ್ನು ಸ್ವಾಗತಿಸಿದರು
ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಉಪಸ್ಥಿತರಿದ್ದರು. ಸುಮಾರು ಎರಡೂವರೆ ತಾಸು ಸಂಪನ್ನಗೊಂಡ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ, ವರ್ಷಗಳ, ಹಿಂದೆ ಪಕ್ಷ ಸಂಘಟನೆ ಸಂದರ್ಭದ ಸನ್ನಿವೇಶಗಳ ನೆನಪಿಸಿದ ಪ್ರಧಾನಿ ಮೋದಿ, ತಾನು ತಾಯ್ಕಾಡು ಗುಜರಾತ್ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಘಟನೆ ಜವಾಬ್ದಾರಿಯಲ್ಲಿದ್ದಾಗ ಪಕ್ಷವು ತೀರಾ ಸೀಮಿತ ಸಂಪನ್ಮೂಲಗಳಿಂದ ಕಾರ್ಯ ನಿರ್ವಹಿಸುವ ಸ್ಥಿತಿಯಿತ್ತು. ಆದರೆ ಕೊರತೆಗಳ ಹೊರತೂ ಪಕ್ಷವಾಗಲಿ, ಪಕ್ಷದ ಪದಾಧಿಕಾರಿಗಳು, ಅಧಿಕಾರಿಗಳು ಪಕ್ಷ ಸಂಘಟನೆ ನಿಟ್ಟಿನಲ್ಲಿ ತಮ್ಮ ಪರಿಶ್ರಮ ಕೈಬಿಟ್ಟಿರಲಿಲ್ಲ. ಬದಲಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರು ಎಂದು ನೆನಪಿಸಿದರು. ಪಕ್ಷ ಕಾರ್ಯಾಲಯದ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು ಒಂದೇ ಕುಟುಂಬದ ಸದಸ್ಯರಂತೆ ಎಂದು ಪ್ರಶಂಸಿಸಿದರು.