ಗುವಾಹಟಿ : ಇನ್ನು 17 ವರ್ಷಗಳಲ್ಲಿ ದೇಶದ ಮೊದಲ ಮುಸ್ಲಿಂ ಬಹುಸಂಖ್ಯಾತ ರಾಜ್ಯ ಉಗಮವಾಗಲಿದೆ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಅಸ್ಸಾಂ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರತಿ 10 ವರ್ಷಗಳಿಗೊಮ್ಮೆ ಶೇ.30ರಷ್ಟು ಬೆಳೆಯುತ್ತಿದೆ. 2041ರ ವೇಳೆಗೆ ನಮ್ಮ ರಾಜ್ಯ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.
“ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಜನಸಂಖ್ಯೆ 10 ವರ್ಷಕ್ಕೊಮ್ಮೆ ಕೇವಲ ಶೇ.16ರಷ್ಟು ಏರಿಕೆಯಾಗುತ್ತಿದೆ ಎಂ ದರು. ‘ಅಂಕಿಸಂಖ್ಯೆಗಳ ಪ್ರಕಾರ ಪ್ರ ಸ್ತುತ ರಾಜ್ಯದಲ್ಲಿ ಶೇ.40ರಷ್ಟು ಮುಸ್ಲಿಂ ಜನಸಂಖ್ಯೆಯಿದೆ. 2041ಕ್ಕೆ ಅಸ್ಸಾಂ ಬಹುತೇಕ ಮುಸ್ಲಿಂ ರಾಜ್ಯವಾ ಗಲಿದೆ.ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಬೇಸರಿಸಿದರು