ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರೆಟಿಕ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಹಾಗೂ ಹಾಲಿ ಅಮರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಗೆ ದಾಖಲೆ ಪ್ರಮಾಣದ ದೇಣಿಗೆ ಹರಿದು ಬಂದಿದೆ. ರೇಸ್ನಿಂದ ಹಿಂದೆ ಸರಿದಿದ್ದ ಹಾಲಿ ಅಧ್ಯಕ್ಷ ಜೋ ಬೈಡೆನ್ ಕಳೆದ ಭಾನುವಾರವಷ್ಟೇ ಕಮಲಾ ಹೆಸರನ್ನು ಅನುಮೋದಿಸಿದ್ದರು. ಅದಾದ ಒಂದು ವಾರದಲ್ಲಿ ದಾಖಲೆ ಎನ್ನಬಹುದಾದ 1650 ಕೋಟಿ ರು.ಗಿಂತಲೂ ಹೆಚ್ಚಿನ ಹಣ ಚುನಾವಣಾ ದೇಣಿಗೆಯಾಗಿ ಸಂಗ್ರಹವಾಗಿದೆ. ಈ ಪೈಕಿ ಮೊದಲ ಬಾರಿಗೆ ದೇಣಿಗೆ ನೀಡಿದವರ ಪ್ರಮಾಣವೇ ಹೆಚ್ಚಿದೆ. ಇದು ತಳ್ಳಮಟ್ಟದಿಂದಲೂ ಕಮಲಾಗೆ ಉತ್ತಮ ಬೆಂಬಲ ಇದೆ ಎನ್ನುವುದುನ್ನು ತೋರಿಸುತ್ತದೆ ಎಂದು ಕಮಲಾರ ಚುನಾವಣಾ ತಂಡ ಹೇಳಿದೆ.