ಬೆಂಗಳೂರು : ಭಾರತದ ಮಾನವ ಸಹಿತ ಗಗನ ಯಾನಕ್ಕೆ ದಿನ ಸನಿಹವಾಗಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಪ್ರಧಾನ ಗಗನಯಾತ್ರಿಯಾಗಿ ಪ್ರಯಾಣಿಸಲಿದ್ದಾರೆ.
ಈ ಸಂಬಂಧ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಮಾಹಿತಿ ನೀಡಿದ್ದು, ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರು ಬ್ಯಾಕಪ್ ಅಥವಾ ಬದಲಿ ಗಗನಯಾತ್ರಿ ಆಗಿರಲಿದ್ದಾರೆ ಅಮೆರಿಕ ಬಾಹ್ಯಾಕಾಶ ಸಂಸ್ಥೆಯಾದ ನಾಸಾ, ಮತ್ತು ಖಾಸಗಿ ಬಾಹ್ಯಾಕಾಶ ಸಂಸ್ಥೆ ಆ್ಯಕ್ಸಿಯಂನ ಸಹಯೋಗದೊಂದಿಗೆ ಈ ಅಂತರಿಕ್ಷ ಯಾನ ನಡೆಯಲಿದೆ. ಆಗಸ್ಟ್ ಮೊದಲ ವಾರವೇ ಇವರಿಬ್ಬರಿಗೆ ತರಬೇತಿ ಆರಂಭವಾಗಲಿದೆ ಎಂದು ಇಸ್ರೋ ಹೇಳಿದೆ. ತರಬೇತಿ ಬಳಿಕ ಆ್ಯಕ್ಸಿಯಂ ಮಿಷನ್ 4ನಲ್ಲಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಪ್ರಯಾಣ ಬೆಳೆಸಲಿದ್ದಾರೆ
ಕಳೆದ ವರ್ಷ ವಾಯುಪಡೆಯಿಂದ ನಾಲ್ಕು ಪರೀಕ್ಷಾ ಪೈಲಟ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಅವರ ಪ್ರಾಥಮಿಕ ತರಬೇತಿಯನ್ನು ಗಗನಯಾನ ಮಿಷನ್‌ಗಾಗಿ ಬೆಂಗಳೂರಿನ ಇಸ್ರೋದ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ನೀಡಲಾಗಿತ್ತು. ಇದಕ್ಕೂ ಮುನ್ನ ರಷ್ಯಾದಲ್ಲಿ ಪ್ರಾಥಮಿಕ ಮಟ್ಟದ ತರಬೇತಿಯನ್ನೂ ಪಡೆಯಲಾಗಿದೆ