ಉಡುಪಿ:ನಗರದ ವಿವಿಧ ಕಡೆ ಮಟ್ಕಾದ ಚೀಟಿ ಸಂಗ್ರಹ ಮಾಡುತ್ತಿದ್ದ ಮೂವರನ್ನು ಪೋಲೀಸರು ಬಂಧಿಸಿದ್ದಾರೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಫೋಲೀಸರು ದಾಳಿ ನೆಡೆಸಿ ಶಿವಳ್ಳಿ ಗ್ರಾಮದ ಕಡಿಯಾಳಿಯ ಬಿಜೆಪಿ ಕಚೇರಿ ಬಳಿಯಲ್ಲಿ ಗಣಪತಿ ಎಂಬವನನ್ನು ವಶಕ್ಕೆ ಪಡೆದಿದ್ದು ಇನ್ನಿಬ್ಬರಾದ ಮಂಜುನಾಥ ಹಾಗೂ ಪಾಂಡಾರಿ ಪ್ರಸಾದ್ ಎಂಬವರನ್ನು ಆದಿ ಉಡುಪಿಯ ಎಪಿಎಂಸಿ ಮಾರುಕಟ್ಟೆ ಬಳಿ ಬಂಧಿಸಲಾಗಿದೆ ಆರೋಪಿಗಳಿಂದ ಕ್ರಮವಾಗಿ 940 ಹಾಗೂ 2.440 ಹಣ ಹಾಗೂ ನಂಬರ್ ಬರೆದ ಚೀಟಿ ಹಾಗೂ ಪೆನ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ