146
ಉಡುಪಿಯಲ್ಲಿ ಸೈಬರ್ ವಂಚನೆ
ಉಡುಪಿ: ನಗರದ ಗೀರೀಶ್ ಆಚಾರ್ಯ ಎಂಬವರು ಸೈಬರ್ ವಂಚನೆಗೆ ಒಳಗಾಗಿ 4.09.167 ರೂ.ಗಳನ್ನು ಕಳೆದುಕೊಂಡ ಬಗ್ಗೆ ವರದಿಯಾಗಿದೆ ಫೇಸ್ ಬುಕ್ ನಲ್ಲಿ ಬಜಾಜ್ ಫೈನಾನ್ಸ್ ಸಾಲ ಎಂಬ ಜಾಹಿರಾತನ್ನು ನೋಡಿದ ಗೀರೀಶ್ ಆಚಾರ್ಯ ರವರು ಸಾಲ ಪಡೆಯುವ ಬಗ್ಗೆ ಮಾಹಿತಿ ಪಡೆದು ಆನ್ ಲೈನ್ ಮೂಲಕ ಎಲ್ಲಾ ಮಾಹಿತಿಗಳನ್ನು ಅಪ್ ಲೋಡ್ ಮಾಡಿದ್ದು ದಿನಾಂಕ 01.03.2023 ರಿಂದ 03.03.2023 ರ ಮಧ್ಯದಲ್ಲಿ ಹಂತ ಹಂತವಾಗಿ ಒಟ್ಟು 4.09.167 ರೂ ಗಳನ್ನು ಅಪರಿಚಿತ ಆರೋಪಿಗಳು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಸಾಲವನ್ನು ನೀಡದೇ ವಂಚಿಸಿರುವ ಬಗ್ಗೆ ಉಡುಪಿಯ ಸೆನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

