ವಾಷಿಂಗ್ಟನ್: ಹತ್ತು ದಿನಗಳ ಅವಧಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್, 2025ರ ಫೆಬ್ರವರಿ ವೇಳೆಗೆ ಭೂಮಿಗೆ ಮರಳುವ ಕುರಿತು ನಾಸಾ ಸುಳಿವು ನೀಡಿದೆ.ಕಳೆದ ತಿಂಗಳು ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡು ಹೀಲಿಯಂ ಸೋರಿಕೆಯಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಭೂಮಿಗೆ ಮರಳಿ ಕರೆತರುವ ಯತ್ನಕ್ಕೆ ಬ್ರೇಕ್ ಬಿದ್ದಿದೆ.ಈ ಸಂಬಂಧ ಬೋಯಿಂಗ್ ಜೊತೆಗೂಡಿ ಕೈಲಾದ ಪ್ರಯತ್ನ ಮಾಡುತ್ತಿರುವ ನಾಸಾ, ಎಲಾನ್ ಮಸ್ಕರ ಸ್ಪೇಸ್ ಎಕ್ಸ್‌ನ ಡ್ರಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅವರಿಬ್ಬರು 2025ರ ಫೆಬ್ರವರಿಯಲ್ಲಿ ಮರಳಬಹುದು ಎಂದಿದೆ. ಇದು ಸುನಿತಾರ ಮೂರನೆ ಬಾಹ್ಯಾಕಾಶ ಯಾತ್ರೆಯಾಗಿದೆ