ಸಾಸ್ತಾನ : ಪ್ರತ ವರ್ಷದಂತೆ ಈ ವರ್ಷವೂ ಕೂಡ ಸಾಸ್ತಾನದಿಂದ ತಿರುಪತಿಯವರೆಗೆ ಕಾಲ್ನಡಿಗೆಯಲ್ಲೇ ತೆರಳಿ ಶ್ರೀ ದೇವರ ದರ್ಶನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಪಿ. ಲಕ್ಷ್ಮೀನಾರಾಯಣ ರಾವ್ ನೇತೃತ್ವದಲ್ಲಿ ಸತತ 14 ನೇ ವರ್ಷದ ತಿರುಪತಿ ಪಾದಯಾತ್ರೆಯು ಆಗಸ್ಟ್ 10 ರಿಂದ ಆರಂಭಗೊಂಡಿತು 18 ದಿನ ಈ ಪಾದಯಾತ್ರೆಯು ಕ್ರಮಿಸಲಿರುವುದು.ಮೊದಲ ದಿನ ಸಾಸ್ತಾನದಿಂದ ಹಿರಿಯಡಕ ವೀರಭದ್ರ ದೇವಸ್ಥಾನ ದಲ್ಲಿ ಉಳಿದು, ಹಾಗೆ ಅಲ್ಲಿಂದ ಒಂದೊಂದು ದಿನ ಹೊಸ್ಮಾರು ಲಕ್ಷ್ಮೀ ವೆಂಕಟರಮಣ ಭಜನಾ ಮಂದಿರ, ಧರ್ಮಸ್ಥಳ ಗಂಗೋತ್ರಿ ಹಾಲ್, ಗುಂಡ್ಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಸಕಲೇಶಪುರ ಓಂ ಮಂದಿರ ಹಾಲ್, ಹಾಸನ ಬನಶಂಕರಿ ಕಲ್ಯಾಣ ಮಂಟಪ,ಚೆನ್ನರಾಯಪಟ್ಟಣ ಗಣಪತಿ ಪೆಂಡಾಲ್, ಬೆಳ್ಳೂರು ಕ್ರಾಸ್,ಕುಣಿಗಲ್ ಲಕ್ಷ್ಮೀರಂಗನಾಥ ಹಾಲ್,ಹುಲಿಕುಂಟೆ, ನಂದಿಗ್ರಾಮ ಸಮುದಾಯ ಭವನ,ಕೈವಾರ, ರಾಯಲ್ ಪಾಡು ಶಾಲೆ, ಚಿಂತಪರ್ತಿ ಹಾಲ್, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ, ಕೊನೆಯ ದಿನ, ಶ್ರೀನಿವಾಸ ಮಂಗಾಪುರ ದಿಂದ ತಿರುಮಲ ತಲುಪಿ ದೇವರ ದರ್ಶನ ಪಡೆಯುವರು.
ಈ ಭಾರಿಯ ಪಾದಯಾತ್ರೆಯಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿ ಕಾಲ್ನಡಿಗೆಯಲ್ಲಿ ಸಾಗಿ ಶ್ರೀ ದೇವರ ದರ್ಶನ ಪಡೆಯಲಿದ್ದಾರೆ