ತ್ರಿಶಾ ಕ್ಲಾಸಸ್ : 26ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ತ್ರಿಶಾ ಸಂಸ್ಥೆಯು ಸಿ ಎ , ಸಿಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿದ್ದು ಇದುವರೆಗೂ ಸುಮಾರು 75,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗವನ್ನು ಮುಗಿಸಿದ್ದಾರೆ.ಸಿಎ ಫೌಂಡೇಶನ್ ಮಾಹಿತಿ ಕಾರ್ಯಾಗಾರವು ಆಗಸ್ಟ್ 20ರಂದು ಪೂರ್ವಾಹ್ನ 9 ಗಂಟೆಗೆ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನಡೆಯಲಿದೆ.
ತರಗತಿಯ ವಿಶೇಷತೆಗಳು :
ಅನುಭವಿ ಪ್ರಾಧ್ಯಾಪಕ ವೃಂದ
ವಿದ್ಯಾರ್ಥಿಗಳಿಗೆ ಸ್ಟಡಿ ಮೆಟಿರಿಯಲ್
ಪರೀಕ್ಷಾ ಆಧಾರಿತ ರಿವಿಷನ್ ತರಗತಿಗಳು ಹಾಗೂ ಮಾಕ್ ಟೆಸ್ಟ್ ಸರಣಿ
ಹಾಸ್ಟೆಲ್ ವ್ಯವಸ್ಥೆ
ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಮೆಂಟರ್ ಶಿಪ್
ಸಿ ಎ, ಸಿ ಎಸ್ ಪರೀಕ್ಷೆಗಳು ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಪರೀಕ್ಷೆಗಳಾಗಿದ್ದು ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ಸಿಎ ಫೌಂಡೇಶನ್ , ಸಿಎ ಇಂಟರ್ಮೀಡಿಯಟ್, ಸಿಎ ಫೈನಲ್ , ಸಿಎಸ್ಇಇಟಿ, ಸಿ ಎಸ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಿಕೊಂಡಿದ್ದಾರೆ.ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.