ಕೋಟ: ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಆ ಮೂಲಕ ಸಮಾಜದಲ್ಲಿ ಬದಲಾವಣೆ ಸಾಧ್ಯ,ಸಮಾಜದ ಓರೆ ಕೊರೆಗಳನ್ನು ತಿದ್ದಿ ಹೊಸ ಮನ್ವಂತರಕ್ಕೆ ನಾರಾಯಣಗುರುಗಳು ಆ ಕಾಲಘಟ್ಟದಲ್ಲೆ ಮುನ್ನುಡಿ ಬರೆದಿದ್ದಾರೆ.ಅವರ ಸಿದ್ಧಾಂತ ಒಂದೆ ಜಾತಿ ಮತ ದೇವರು ಪ್ರತಿಯೊಬ್ಬರು ಅರಿತು ಶಾಂತಿ ಸೌಹಾರ್ದತೆ ಬದುಕು ಸಾಧಿಸಬೇಕು ಎಂದುಬಿಲ್ಲವ ಸಂಘದ ಗೌರವಾಧ್ಯಕ್ಷರ ನಾರಾಯಣ ಪೂಜಾರಿ ಕರೆ ಇತ್ತರು ಅವರು ಮಂಗಳವಾರ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘ ಬಾಳ್ಕುದ್ರು ಹಂಗಾರಕಟ್ಟೆ ಇವರ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಭಾಂದವರನ್ನು ಉದ್ದೇಶಿಸಿ ಮಾತನಾಡಿದರು ಸಂಘದ ಸದಸ್ಯರ ಭಜನೆ, ಸತ್ಯನಾರಾಯಣಪೂಜೆ ಹಾಗೂ ನಾರಾಯಣ ಗುರುಗಳ ಗುರುಪೂಜೆ ,ಮಹಾಮಂಗಳಾರತಿ ತದನಂತರ ಅನ್ನ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು ಬಿಲ್ಲವ ಸಂಘದ ಗೌರವಾಧ್ಯಕ್ಷ ವಾಸುದೇವ ಕೋಟ್ಯಾನ್,ಸಂಘದ ಅಧ್ಯಕ್ಷ ವಿಜಯ್ ಪೂಜಾರಿ, ಹಿರಿಯರಾದ ಕುಷ್ಟ ಗುರಿಕಾರ, ಶಿನಪ್ಪ ಅಮೀನ್, ಶಾರದಾ ಪೂಜಾರಿ, ಗುಲಾಬಿ, ರಾಜುಪೂಜಾರಿ,ಶಕುಂತಲಾ ವಾಸುದೇವ ಕೋಟ್ಯಾನ್, ಆರ್ಚಕರಾದ ಶಂಕರ ಪೂಜಾರಿ ಬಾಳ್ಕುದ್ರು ಸದಸ್ಯರಾದ ರವೀಂದ್ರ ಸುವರ್ಣ ,ಆನಂದಪೂಜಾರಿ ,ಸುಭಾಸ್ ಪೂಜಾರಿ ,ಸತೀಶ್ ಪೂಜಾರಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.