ಕೋಟ: ಸಾಸ್ತಾನ ಪ್ರಾಥಮಿಕ ಅರೋಗ್ಯ ಕೇಂದ್ರ ಇಲ್ಲಿಗೆ ಹೊಸ ವಾರ್ಡ್, ತುರ್ತು ಚಿಕಿತ್ಸೆ ಕೊಠಡಿ ಹಾಗೂ ಎದೆ ಹಾಲುಣಿಸುವ ಕೊಠಡಿಗಳನ್ನು ನಿರ್ಮಿಸಲು ಅಮೆರಿಕೇರ್ಸ್ ಇಂಡಿಯಾ ಫೌಂಡೇಶನ್ ಉಡುಪಿ ಮುಂದಾಗಿದ್ದು ಈ ಹಿನ್ನಲ್ಲೆಯಲ್ಲಿ ಇದರ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ಆಡಳಿತ ವೈದ್ಯಾಧಿಕಾರಿ ಡಾ. ರಾಘವೇಂದ್ರ ರಾವ್ ಗುದ್ದಲಿ ಪೂಜೆ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಸವಿತಾ, ಸರ್ವ ಸಿಬ್ಬಂದಿ ವರ್ಗದವರು,ಅರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಐರೋಡಿ ವಿಠ್ಠಲ್ ಪೂಜಾರಿ, ಅಮೆರಿಕೇರ್ಸ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ನವೀನ್ , ಸಿವಿಲ್ ಕಂಟ್ರಾಕ್ಟರ್ ನಾಗರಾಜ ಪೈ ಉಪಸ್ಥಿತರಿದ್ದರು.