ನವದೆಹಲಿ : ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ನೀಡಿರುವ ಝಡ್ ಶ್ರೇಣಿ ಭದ್ರತೆ ಹೆಚ್ಚಿಸಲಾಗಿದ್ದು, ಅಡ್ವಾನ್ಸ್ ಸೆಕ್ಯೂರಿಟಿ ಲೈಸನ್ (ಎಎಎಲ್) ಭದ್ರತೆ ಒದಗಿಸಲಾಗಿದೆ. ಎಎಸ್ಎಲ್ ಭದ್ರತೆ ಹೊಂದಿರುವ ಅಮಿತ್ ಶಾ, ರಾಜನಾಥ್ ಸಿಂಗ್, ರಾಹುಲ್, ಸೋನಿಯಾ, ಪ್ರಿಯಾಂಕಾ ವಾದ್ರಾ ಪಟ್ಟಿಗೆ ಭಾಗವತ್ ಸೇರ್ಪಡೆಯಾಗಿದ್ದಾರೆ. ಝಡ್ ಶ್ರೇಣಿ ಭದ್ರತೆ ಹೊಂದಿರುವ ಎಲ್ಲರಿಗೂ ಎಎಸ್ಎಲ್ ಭದ್ರತೆ ನೀಡುವುದಿಲ್ಲ, ಈ ಭದ್ರತೆಯನ್ನು ಸುರಕ್ಷತೆ ಪರಿಶೀಲನೆ ಕಾರಣಕ್ಕೆ ನೀಡಲಾಗುತ್ತದೆ. ಇದರ ಪ್ರಕಾರ ನಾಯಕರು ಭೇಟಿ ನೀಡುವ ಸ್ಥಳದ ಪೂರ್ವಭಾವಿ ಪರಿಶೀಲನೆ, ಸ್ಥಳೀಯ ಪೊಲೀಸರ ಜೊತೆ ಸಮಾಲೋಚನೆ, ಸಂಭವ ನೀಯ ಅಪಾಯು ಎದುರಿಸಲು ಬೇಕಾದ ಕಾರ್ಯತಂತ್ರ ರಚನೆ ಸೇರಿದಂತೆ ಸುರಕ್ಷತೆ ಪರಿಶೀಲನೆಯ ಹಲವು ಕಾರ್ಯಗಳನ್ನು ಒಳಗೊಂಡಿರುತ್ತದೆ.