ನವದೆಹಲಿ : ರಾಜಕೀಯ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವವನ್ನು ಅನುಸರಿಸದಿದ್ದಾಗ ಏನಾಗುತ್ತದೆ ಎಂಬುದಕ್ಕೆ ಅನೇಕ ವಿರೋಧ ಪಕ್ಷಗಳೇ ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿಪ್ರಾಯಪಟ್ಟರು. ಪ್ರತಿ ಆರು ವರ್ಷಗಳಿಗೊಮ್ಮೆ ನಡೆಯುವ ಬಿಜೆಪಿ ಸದಸ್ಯತ್ವ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಸದಸ್ಯರು ಹೊಸತನದಿಂದ ಯೋಚಿಸಿ, ಗಡಿ ಗ್ರಾಮಗಳನ್ನು ಪಕ್ಷಕ್ಕೆ ಭದ್ರ ಕೋಟೆಯನ್ನಾಗಿ ಪರಿವರ್ತಿಸುವಂತೆ ಕರೆ ನೀಡಿದರು
ಹೊಸ ಪೀಳಿಗೆಗೆ 10 ವರ್ಷಗಳ ಹಿಂದಿನ ಹಗರಣಗಳ ಬಗ್ಗೆ ಸುದ್ದಿಗಳ ಬಗ್ಗೆ ತಿಳಿದಿಲ್ಲ ಸದಸ್ಯತ್ವ ಅಭಿಯಾನದಲ್ಲಿ 18 -25 ವರ್ಷ ವಯಸ್ಸಿನವರನ್ನು ಗುರಿಯಾಗಿಸಲು ಪಕ್ಷದ ನಾಯಕರನ್ನು ಕೇಳಿಕೊಂಡರು. ಅಸ್ತಿತ್ವದಲ್ಲಿರುವ ಸದಸ್ಯತ್ವ ಗಳನ್ನು ನವೀಕರಿಸಲಾಗುತ್ತದೆ ಮತ್ತು ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗುತ್ತದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮೋದಿಯವರನ್ನು ಮೊದಲ ಸದಸ್ಯರನ್ನಾಗಿ ನೋಂದಾಯಿಸಿ, ಅಭಿಯಾನಕ್ಕೆ ಚಾಲನೆ ನೀಡಿದರು.