Home » ಬ್ರೂನೈ ದೇಶಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ
 

ಬ್ರೂನೈ ದೇಶಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ

ಪಿ ಎಂ ನರೇಂದ್ರ ಮೋದಿ

by Kundapur Xpress
Spread the love

ಬಂದರ್‌ಸೆರಿ ಬೇಗವಾನ್ (ಬ್ರೂನೈ) ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಬ್ರೂನೈ ಪ್ರವಾಸ ಆರಂಭಿಸಿದ್ದು, 7000 ಐಷಾರಾಮಿ ಕಾರುಗಳನ್ನು ಹೊಂದುವ ಮೂಲಕ ಗಿನ್ನೆಸ್ ದಾಖಲೆ ಸ್ಥಾಪಿಸಿರುವ ಅಲ್ಲಿನ ದೊರೆಯಿಂದ ರಾಜಾತಿಥ್ಯ ದೊರೆತಿದೆ

ಬ್ರೂನೈ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಯಾಗಿರುವ  ಮೋದಿ ಅವರಿಗೆ ದೊರೆ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರು 1788 ಕೊಠಡಿಗಳನ್ನು ಹೊಂದಿರುವ, ಚಿನ್ನದ ಗುಮ್ಮಟದಿಂದ ಕೂಡಿರುವ ತಮ್ಮ ವೈಭವೋಪೇತ ಅರಮನೆಯಲ್ಲಿ ಆತಿಥ್ಯ ನೀಡಿದ್ದಾರೆ. ಇದು ವಿಶ್ವದ ಅತಿದೊಡ್ಡ ವಸತಿ ಅರಮನೆಯಾಗಿದ್ದು ಗಿನ್ನೆಸ್ ದಾಖಲೆಯಲ್ಲೂ ಸ್ಥಾನ ಪಡೆದಿದೆ.

ಮೋದಿ ಅವರು ಬಂದಿಳಿಯುತ್ತಿದ್ದಂತೆಯೇ ಅವರನ್ನು ಬ್ರೂನೈ ರಾಜಕುಮಾರ ಅಲ್-ಮುತ್ತದಿ ಬಿಲ್ಲಾಹ್ ವಿಮಾನ ನಿಲ್ದಾಣಕ್ಕೇ ಬಂದು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ವೇಳೆ ಅವರಿಗೆ ಗೌರವ ರಕ್ಷೆ ನೀಡಲಾಯಿತು. ಈ ವೇಳೆ ನಿಲ್ದಾಣದಲ್ಲಿ ಭಾರತೀಯ ಸಮುದಾಯದವರೂ ಮೋದಿ ಅವರನ್ನು ಸ್ವಾಗತಿಸಿದರು. ದ್ವಿಪಕ್ಷೀಯ *ಭೇಟಿಗಾಗಿ ಬ್ರೂನೈಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ದಾಖಲೆಗೂ ನರೇಂದ್ರ ಮೋದಿ ಪಾತ್ರರಾಗಿದ್ದಾರೆ

   

Related Articles

error: Content is protected !!