ಕುಂದಾಪುರ : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಗ್ರಾಮದಲ್ಲಿ ನಡೆದ ಅಂಚೆ ಕಛೇರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣಾ ಉಪ ನಿರೀಕ್ಷಕ ಹರೀಶ್ ಆರ್ ನೇತೃತ್ವದ ಪೊಲೀಸ್ ತಂಡ ಓರ್ವ ಆರೋಪಿಯನ್ನು ಭಟ್ಕಳ ತಾಲೂಕಿನ ಭಟ್ಕಳ ಜಾಲಿ ರಸ್ತೆ ಕ್ರಾಸ್ ಎಂಬಲ್ಲಿ ಬಂಧಿಸಿದೆ
ಮರವಂತೆ ಗ್ರಾಮದಲ್ಲಿ ಅಂಚೆ ಕಛೇರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಸಿ ಕ್ಯಾಮರಾದ ಪೂಟೇಜ್ ನ ಆಧಾರದ ಮೇಲೆ ಆರೋಪಿಯ ಪತ್ತೆಯ ಬಗ್ಗೆ ಮಾಹಿತಿ ಪಡೆದುಕೊಂಡು ನಿನ್ನೆ ದಿನಾಂಕ 03.09.2024 ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಭಟ್ಕಳ ಜಾಲಿ ರಸ್ತೆ ಕ್ರಾಸ್ ಎಂಬಲ್ಲಿ ಪ್ರಕ್ರಣದ ಆರೋಪಿ ಪೌಜಾನ್ ಅಹಮ್ಮದ್(19 ವರ್ಷ) ತಂದೆ: ಮುಸ್ತಾಕ್ ಅಹಮ್ಮದ್, ಭಟ್ಕಳ ತಾಲೂಕು ಹಾಗೂ ಇನ್ನೊರ್ವ ಕಾನೂನು ಸಂಘರ್ಷಕ್ಕೋಳಗಾದ ಬಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ಆರೋಪಿಯು ಕೃತ್ಯಕ್ಕೆ ಬಳಸಿದ KA 30 L- 0097 ನಂಬ್ರದ ಟಿ.ವಿ.ಎಸ್ ಮೋಟಾರ್ ಸೈಕಲ್ನ್ನು ಸ್ವಾಧೀನ ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ
ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ರವರಾದ ಹರೀಶ್ ಆರ್, ಮತ್ತು ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿಗಳಾದ ಸಂದೀಪ ಕುರಾಣಿ, ರಾಜು ನಾಯ್ಕ, ನಾಗರಾಜ ಹಾಗೂ ದಿನೇಶ್ ರವರ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು