Home » ಸೈಬರ್ ದಾಳಿ ತಡೆಗೆ 5000 ಸೈಬರ್ ಕಮಾಂಡೋ ನೇಮಕ
 

ಸೈಬರ್ ದಾಳಿ ತಡೆಗೆ 5000 ಸೈಬರ್ ಕಮಾಂಡೋ ನೇಮಕ

by Kundapur Xpress
Spread the love

ನವದೆಹಲಿ : ಭಾರತದಲ್ಲಿ ಸೈಬರ್‌ ಅಪರಾಧಗಳನ್ನು ತಡೆಯಲು ಮುಂದಿನ 5 ವರ್ಷಗಳಲ್ಲಿ 5,000 ಸೈಬರ್‌ ಕಮಾಂಡೋಗ ಳನ್ನು ನೇಮಿಸಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಸಂಸ್ಥಾಪನಾ ದಿನಾಚರಣೆಯಲ್ಲಿ: ಮಾತನಾಡಿದ ಅವರು,ಈ 5000 ಕಮಾಂ ಡೋಗಳಿಗೆ ಸೈಬ‌ರ್ ದಾಳಿಯನ್ನು ತಡೆಯುವುದರ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ಸೈಬರ್‌ ಸುರಕ್ಷಿತೆ ಬಗ್ಗೆ ಒತ್ತಿ ಹೇಳಿದ ಅವರು, ‘ವಿಶ್ವದ 8.46 ರಷ್ಟು ಡಿಜಿಟಲ್ವಹಿವಾಟುಗಳು ಭಾರತದಲ್ಲಿ ನಡೆಯುತ್ತಿವೆ. ಸೈಬ‌ರ್ ಭದ್ರತೆಯನ್ನು ಖಾತ್ರಿ ಪಡಿಸಿಕೊಳ್ಳದೇ ದೇಶದ ಪ್ರಗತಿ ಸಾಧ್ಯವಿಲ್ಲ. ಇದೊಂದು ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗ’ ಎಂದರು.‘ದೇಶದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. 2014ರ ಸೆಪ್ಟೆಂಬರ್ ನಲ್ಲಿ 25 ಕೋಟಿಗೆ ಅಂತರ್ಜಾಲ ಬಳಕೆದಾರರಿದ್ದರು.ಆದರೆ ಈ ವರ್ಷದ ಮಾರ್ಚ್ 31 ರ ವೇಳೆಗೆ ನಾವು ದೇಶದಲ್ಲಿ 95 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿದ್ದೇವೆ. 2014 ರಲ್ಲಿ 600 ಪಂಚಾಯತ್‌ಗಳು ಇಂಟರ್ನೆಟ್‌ಗೆ ಲಿಂಕ್ ಮಾಡಲ್ಪಟ್ಟಿದ್ದವು. ಅದು ಈಗ ಈಗ 2.13 ಲಕ್ಷಕ್ಕೆ ಏರಿದೆ. ಹೀಗಾಗಿ ಸೈಬರ್ ಭದ್ರತೆ ಕಾಪಾಡುವಿಕೆ ಅನಿವಾರ್ಯ’ ಎಂದರು.

   

Related Articles

error: Content is protected !!