ಕುಂದಾಪುರ : ಕುಂದಾಪುರದ ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಮಹಾಸಭೆಯು ಕುಂದಾಪುರ ನಗರದ ಮೊಗವೀರ ಭವನದಲ್ಲಿ ದಿನಾಂಕ 15.09.2024ರ ರವಿವಾರ ಜರುಗಿತು ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ನಾಗರಾಜ್ ಕಾಮಧೇನು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವರದಿ ಸಾಲಿನಲ್ಲಿ ರೂ. 32059.74 ಲಕ್ಷಕ್ಕೂ ಮಿಕ್ಕಿದ ವ್ಯವಹಾರ ನಡೆಸಿ, ರೂ.179.28 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.17 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಸಂಘವು ವರದಿ ಸಾಲಿನಲ್ಲಿ ರೂ. 6,942.64 ಲಕ್ಷ ಠೇವಣಿ ಹೊಂದಿದ್ದು ಸದಸ್ಯರಿಗೆ ರೂ. 5,638..25 ಲಕ್ಷ ಸಾಲ ನೀಡಿದೆ ಎಂದು ತಿಳಿಸಿದರು.ಮಹಾಸಭೆಯ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಸಹಾಯಕ ಉಪ ನಿಬಂಧಕರಾಗಿ ನಿವೃತ್ತಿ ಹೊಂದಿದ ಎಸ್ ವಿ ಅರುಣ್ ಕುಮಾರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು
ಪ್ರತಿಭಾನ್ವಿತ 27 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 1,07.000ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.